dtvkannada

'; } else { echo "Sorry! You are Blocked from seeing the Ads"; } ?>

ಬೆಳ್ಳಾರೆ: ಟ್ಯುಟೋರಿಯಲ್ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ನೆರೆಮನೆ ನಿವಾಸಿ, ಆರೋಪಿ ಅಶ್ರಫ್ ಎಂಬಾತನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿದೆಯೆಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯ ಮನೆಯ ಹತ್ತಿರದಲ್ಲೇ ಆರೋಪಿಯ ಮನೆ ಇದ್ದು ತನ್ನ ಹೆಂಡತಿ ಮಕ್ಕಳ ಜೊತೆ ವಾಸವಾಗಿದ್ದಾನೆ ಜೊತೆಗೆ ಫೆ.10 ರಂದು ಸಂಜೆ 4:15 ರ ವೇಳೆ ವಿದ್ಯಾರ್ಥಾನಿ ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವಾಗ ಅರೋಪಿಯು ಆಗಮಿಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿದ್ದು, ನೀನು ರಾತ್ರಿ ಸಮಯ ನಿನ್ನ ತಾಯಿ ಮೊಬೈಲಿನಿಂದ ಕರೆ ಮಾಡಿ ನನ್ನ ಜೊತೆ ಮಾತನಾಡಬೇಕು ಎಂದು ತಾಕಿತು ಮಾಡಿರುತ್ತಾನೆ. ಈ ಬಗ್ಗೆ ಬೆಚ್ಚಿ ಬಿದ್ದ ಬಾಲಕಿಯು ಮನೆಗೆ ಬಂದು ತಾಯಿ ಜೊತೆ ವಿಚಾರವನ್ನು ಎಳೆಎಳೆಯಾಗಿ ಹಂಚಿಕೊಂಡಿದ್ದು ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯು ಹೆದರಿ ಶಾಲೆಗ ಹೋಗುವುದನ್ನು ಬಿಟ್ಟು ಬಿಡುವಷ್ಟು ಹಂತಕ್ಕೆ ತಲುಪಿದ್ದಾಳೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

ಬಳಿಕ ಆರೋಪಿ ಪದೇ ಪದೇ ಕರೆ ಮಾಡಲು ಒತ್ತಾಯಿಸುತ್ತಿದ್ದುದರಿಂದ ಬಾಲಕಿಯ ತಾಯಿ ಫೆ.12 ರಂದು ಭಾನುವಾರ ಮಗಳು ಮನೆಯಲ್ಲಿರುವ ಸಮಯ ಮೊಬೈಲಿನಿಂದ ಅಶ್ರಫ್‌ಗೆ ಕರೆ ಮಾಡಿ ಮಾತಾಡಿಸಿದಾಗ ಆತನು ಅಶ್ಲೀಲವಾಗಿ ಮಾತನಾಡಿದ್ದು, ಇದರಿಂದ ಬಾಲಕಿ ಹೆದರಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಿರುವುದನ್ನು ನಿಲ್ಲಿಸಿದ್ದಾಳೆ. ವಿದ್ಯಾರ್ಥಿನಿಯ ಜೊತೆ ಮಾತನಾಡಿದ ಕಾಲ್ ರೆಕಾರ್ಡರ್ ಮನೆಯವರು ಸೇವ್ ಮಾಡಿ ಇಟ್ಟುಕೊಂಡಿರುವುದರ ಬಗ್ಗೆ ಮಾಹಿತಿ ದೊರಕಿದ್ದು ಈ ಬಗ್ಗೆ ಬಾಲಕಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು, ಕಲಂ 354(ಡಿ), 509 ಐಪಿಸಿ ಮತ್ತು ಕಲಂ 12 ಫೋಕ್ಸೋ ಆಕ್ಟ್ 2012 ರಂತೆ ಪ್ರಕರಣ ದಾಖಲಾಗಿದೆಯೆಂದು ವರದಿಯಾಗಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!