dtvkannada

ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ. ಆದ್ರೆ ನೀವು ಯಾವತ್ತೂ ಈ ರೀತಿ ಸಾಹಸಕ್ಕೆ ಹೋಗದಿರಿ.
2017ರಲ್ಲಿ ನಡೆದ ಘಟನೆ ಈಗ ಮತ್ತೇ ಸಕ್ಕತ್ತಾಗಿ ವೈರಲ್​​ ಆಗಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಇಲ್ಲಿದೆ ನೋಡಿ ಕಂಪ್ಲೀಟ್​​​ ಡಿಟೇಲ್ಸ್​​​.

ಸುಂದರವಾದ ಪರಿಸರ, ಜುಳು ಜುಳು ಹರಿಯುತ್ತಿರುವ ನದಿ. ನದಿಯ ಮೇಲೆ ಸೇತುವೆಯ ರೀತಿಯಲ್ಲಿ ಮರದ ದಿಂಬಿಯನ್ನು ಕಾಣಬಹುದು. ಈ ದಿಂಬಿಯ ಮೇಲೆ ಮಹಿಳೆಯೊಬ್ಬಳು ಯೋಗ ಭಂಗಿಯಲ್ಲಿ ಮಾಡಲು ಪ್ರಯತ್ನಿಸಿದ್ದಾಳೆ. ಜೊತೆಗೆ ತನ್ನ ಈ ಸಾಹಸವನ್ನು ವಿಡಿಯೋ ಮಾಡಿಸಿಕೊಂಡಿದ್ದಾಳೆ.

ಆದರೆ ಅಲ್ಲಿ ಆಗಿದ್ದೇ ಬೇರೆ. ಯೋಗ ಭಂಗಿ ಪ್ರಯತ್ನಿಸಿದ ಆಕೆ ಕಾಲು ಜಾರಿ ಹರಿಯುವ ನದಿಗೆ ಬಿದ್ದಿದ್ದಾಳೆ. ಈ ವಿಡಿಯೋ 4 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು . ಆದರೆ ಇತ್ತೀಚೆಗೆ (ಫೆ.24)ರಂದು ಮತ್ತೇ ಟ್ವಿಟರ್​​ನಲ್ಲಿ ಮತ್ತೇ ಪೋಸ್ಟ್​​ ಮಾಡಲಾಗಿದೆ. ಈ ಪೋಸ್ಟ್​​​​ ಕೇವಲ ಎರಡೇ ದಿನಗಳಲ್ಲಿ 1.4 ಮಿಲಿಯನ್​​ ವೀಕ್ಷಣೆ ಪಡೆದಿದೆ.

ಇತ್ತೀಚೆಗಷ್ಟೇ ಟೀನ್​​ ವ್ಲಾಗ್ ಟ್ವೀಟ್​​ ಖಾತೆಯಲ್ಲಿ ಹಂಚಿಕೊಂಡಿರುವ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ:

ಇತ್ತೀಚಿಗಷ್ಟೇ ಈ ಪೋಸ್ಟ್ ಹಂಚಿಕೊಂಡಿರುವ ಟೀನ್ ವ್ಲಾಗ್ ಟ್ವೀಟ್ ಖಾತೆಯ ಪ್ರಕಾರ ಮಿಸ್ ಮೇರಿ ಯಾವುದೇ ದೊಡ್ಡ ಮಟ್ಟದಲ್ಲಿ ಗಾಯಗಳಾದೇ ಆರಾಮವಾಗಿ ಇದ್ದರೆ ಹಾಗೂ ಜೊತೆಗೆ ಆಕೆಯ ಈ ಸಾಹಸ ಹಾಸ್ಯಸ್ಪದವಾಗಿಯೇ ತೆಗೆದುಕೊಂಡಿದ್ದಾರೆ.ಈ ವಿಡಿಯೋ ಟ್ವಿಟರ್‌ನಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಂತಹ ಸಾಹಸಗಳಿಗೆ ಎಂದಿಗೂ ಕೈ ಹಾಕದಿರಿ ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯ ವರೆಗೆ ಈ ಪೋಸ್ಟ್ 2194 ರೀ ಟ್ವಿಟ್ ಆಗಿದೆ.

By dtv

Leave a Reply

Your email address will not be published. Required fields are marked *

error: Content is protected !!