ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಕಷ್ಟ ಅಂತ ಬಂದುವರಿಗೆ ಹಣ ಸಹಾಯ ಮಾಡಿ ಉದಾರತೆ ಮೆರೆಯುತ್ತಾರೆ. ಆದ್ರೆ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಬಿಎಂಪಿ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ಹಣ ಹಂಚಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು…ಜಮೀರ್ ಅಹಮ್ಮದ್ ಖಾನ್ ಅವರು ಬೆಂಗಳೂರಿನ ಗೋರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ನೀಡುವುದರ ಜೊತೆಗೆ ನ್ಯಾಷನಲ್ ಟ್ರಾವೆಲ್ಸ್ ಕಿಟ್ ವಿತರಣೆ ಮಾಡಿದ್ದಾರೆ.
ಬೆಂಗಳೂರಿನ ಗೋರಿಪಾಳ್ಯದ ಪೋಸ್ಟ್ ಆಫೀಸ್ ಆವರಣದಲ್ಲಿ ಸೌದಿ ಅರೇಬಿಯಾದ 500 ಮುಖಬೆಲೆಯ ನೋಟು ನೀಡಿ ಬಿಬಿಎಂಪಿಯ 46 ಆಶಾ ಕಾರ್ಯಕರ್ತೆಯರನ್ನು ಮೆಕ್ಕಾಗೆ ಕಳಿಸಿಕೊಟ್ಟರು. ಪಾದರಾಯನಪುರ ವಾರ್ಡ್, ಜೆಜೆಆರ್ ನಗರದ ವಾರ್ಡ್ ಹಾಗೂ ರಾಯಪುರಂ ವಾರ್ಡ್ ಆಶಾ ಕಾರ್ಯಕರ್ತೆಯರಿಗೆ ವಿದೇಶಿ ನೋಟು ನೀಡಿದ್ದಾರೆ. ಜಮೀರ್ ಹಂಚಿದ ಸೌದಿ ಅರೇಬಿಯಾದ 5೦೦ ರೂ.ಗೆ ಭಾರತದಲ್ಲಿ 11ಸಾವಿರದ 34 ರೂಪಾಯಿ.
ಇನ್ನು ಹಣ ಹಂಚಿಕೆ ಮಾಡಿರುವ ಬಗ್ಗೆ ತಮ್ಮ ಅಧಿಕೃತ ಫೇಸ್ಬುಕ್ ಹಾಗೂ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿದೇಶಿ ನೋಟು ಹಂಚಿಕೆಗೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಇವತ್ತು ವಿದೇಶಿ ನೋಟು ಹಂಚುತ್ತಾರೆ. ನಾಳೆ ಮತ್ತೊಂದು ಮಾಡುತ್ತಾರೆ. ಚುನಾವಣೆಯ ಸಮಯದಲ್ಲಿ ಮತದಾರರನ್ನ ಸೆಳೆಯುವ ಪ್ರಯತ್ನವಿದು. ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.