ಮಂಗಳೂರು: ಗ್ಲೊಬಲ್ ಸ್ಕೊಲರ್ಸ್ ಫೌಂಡೇಶನ್ ವತಿಯಿಂದ ಫೆಬ್ರವರಿ 12 ರಂದು ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಸ್ಕಾಲರ್ ಫೌಂಡೇಶನ್‌ನ ಭಾರತೀಯ ನಾರಿ ರತ್ನ ಪ್ರಶಸ್ತಿಯನ್ನು ಮಂಗಳೂರಿನ ತ್ವಚೆ ತಜ್ಞೆ(skin Specialist) ನಫೀಸಾ ಅಫ್ನಾನ್ ಫಾರೂಕ್ ಅವರಿಗೆ ಪ್ರದಾನ ಮಾಡಲಾಯಿತು.
ನಫೀಸಾ ಅಫ್ನಾನ್ ಫಾರೂಕ್ ಅವರು ಹೆಸರುವಾಸಿಯಾಗಿರುವ ಅರ್ತಿ ಬೈ ಎಲೆನ್ಜಾ ಇದರ ಸಂಸ್ಥಾಪಕಿ. ವೃತ್ತಿಯಲ್ಲಿ ವಕೀಲೆಯಾಗಿರುವ ಅವರು, ಮಹಿಳಾ ಉದ್ಯಮಿಯಾಗಿ ಕಠಿಣ ಪರಿಶ್ರಮದಿಂದ ಶ್ರೇಷ್ಟಮಟ್ಟಕ್ಕೆ ಬೆಳೆದು ಬಂದಿದ್ದಾರೆ.
ಉದ್ಯಮ ಕ್ಷೇತ್ರದಲ್ಲಿ ಅವರ ಅಪಾರ ಉತ್ಸಾಹ ಮತ್ತು ಸಾಧನೆಗಳಿಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಬಾತ್ರಾ ಗ್ರೂಪ್ ಆಫ್ ಕಂಪನೀಸ್‌ನ ಪದ್ಮಶ್ರೀ ಮುಖೇಶ್ ಬಾತ್ರಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಮೂಲಕ ಭಾರತೀಯ ನಾರಿ ರತ್ನ ಪ್ರಶಸ್ತಿ ಪಡೆದ ಮಂಗಳೂರಿನ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಅರ್ಥಿ ಬೈ ಎಲೆನ್ಜಾ ಎಂಬುವುದು ನೈಸರ್ಗಿಕವಾಗಿ ತಯಾರಿಸಲ್ಪಡುವ ತ್ವಚೆಯ(Healthy skin) ಬ್ರಾಂಡ್ ಆಗಿದ್ದು, ಚರ್ಮದ ಸುರಕ್ಷತೆ ಮತ್ತು ಆರೋಗ್ಯಕರ ದೃಷ್ಟಿಯಿಂದ ಮಹಿಳೆಯರಿಗೆ ಇದು ಉಪಯುಕ್ತಕರವಾಗಿದೆ.