ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸರ್ಕಾರಕ್ಕೆ ನೀಡಿರುವ ಗಡುವುಗೆ ತೆರೆ ಬೀಳಲಿದ್ದು ಇಂದು ಸಂಜೆ ಒಳಗಾಗಿ ಸರ್ಕಾರ ನೌಕರರ ಮನವೋಲಿಸುತ್ತಾ ಎಂಬುವುದು ಕಾದು ನೋಡಬೇಕಿದೆ.
ಸರ್ಕಾರದ ಮುಂದೆ ಎರಡು ಬೇಡಿಕೆಗಳನ್ನಿಟ್ಟಿದ್ದು ವೇತನ ಆಯೋಗದ ಮಧ್ಯಂತರ ವರದಿಯನ್ನು ಹಿಂಪಡೆಯಬೇಕು.
ಹೊಸ ಪಿಂಚಣಿ ಯೋಜನೆಯನ್ನಿ ಹಿಂಪಡೆದು ಹಳೇ ಪಿಂಚಣಿ ನೀತಿಯನ್ನು ಜಾರಿಗೆ ತರಬೇಕು ಮತ್ತು ಸರ್ಕಾರಿ ನೌಕರರಿಗೆ ಶೇ 40 ರಷ್ಟು ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿ ನಾಳೆಯಿಂದ ಸರ್ಕಾರಿ ನೌಕರರು ಮತ್ತೆ ಮುಷ್ಕರಕ್ಕೆ ಕೂರಲಿದ್ದಾರೆ.
ಸರ್ಕಾರ ಇವರ ಬೇಡಿಕೆಗಳನ್ನು ಯಾವಾಗ ಪೂರೈಸುತ್ತೋ ಅಲ್ಲಿಯವರೆಗೆ ಮುಷ್ಕರ ಮುಂದೂಡುವ ಸಾಧ್ಯತೆ ಹೆಚ್ಚಿದೆ.
ಇನ್ನು ರಾಜ್ಯಾದ್ಯಂತ ಸರ್ಕಾರಿ ನೌಕರರು ಈ ಮುಷ್ಕರದಲ್ಲಿ ಬಾಗವಹಿಸುತ್ತಿರುವುದರಿಂದ ನಾಳೆಯಿಂದ ಎಲ್ಲಾ ಸರ್ಕಾರಿ ಕೆಲಸ ಕಚೇರಿಗಳಲ್ಲಿ ವ್ಯತ್ಯಯ ಸಂಭವಿಸಲಿದೆ.
ಶಾಲಾ ಕಾಲೇಜು, ಪಂಚಾಯತ್ ಕಚೇರಿ, ಉಪನೋಂದಾವನಾಧಿ ಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ , ಗ್ರಾಮ ಲೆಕ್ಕಿಗರು ಸರ್ಕಾರಿ ನಿಗಮ ಮಂಡಳಿ ಸಹಿತ ಇನ್ನಿತರ ಎಲ್ಲಾ ಸರ್ಕಾರಿ ಕಚೇರಿಗಳ ಸರ್ಕಾರಿ ನೌಕರರು ತಮ್ಮ ಕರ್ತವ್ಯಕ್ಕೆ ಗೈರು ಹಾಜರಿಯಾಗುವ ಮೂಲಕ ಮುಷ್ಕರದಲ್ಲಿ ಬಾಗವಹಿಸಲಿದ್ದಾರೆ.
ಸರಿ ಸುಮಾರು 5,11 ಲಕ್ಷ ನೌಕರರು ಮುಷ್ಕರದಲ್ಲಿ ಬಾಗವಹಿಸಲಿದ್ದು ಎರಡು ಬೇಡಿಕೆಗಳನ್ನು ಮುಂದಿರಿಸಿ ಬೃಹತ್ ಮುಷ್ಕರವನ್ನು ನಡೆಸಲಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ವ್ಯತ್ಯಯ ಉಂಟಾಗಬಹುದು.
ಇನ್ನೂ ಮುಷ್ಕರ ಇದೇ ದಿನಾಂಕಕ್ಕೆ ಮುಕ್ತಾಯಗೊಳ್ಳುತ್ತೇ ಎಂದು ಹೇಳಲೂ ಸಾಧ್ಯವಿಲ್ಲ.
ಸರ್ಕಾರಿ ನೌಕರರು ಒಗ್ಗಟ್ಟಿನಿಂದ ಸರ್ಕಾರಕ್ಕೆ ತಮ್ಮ ಧ್ವನಿಯನ್ನು ಮುಟ್ಟಿಸಲಿದ್ದು ಸರ್ಕಾರ ಯಾವ ರೀತಿ ಪ್ರತಿಕ್ರಯಿಸುತ್ತೆ ಎಂಬುವುದು ಕಾದು ನೋಡಬೇಕಿದೆ.
ಇನ್ನು ಜನ ಸಾಮಾನ್ಯರ ಸರ್ಕಾರಿ ಕೆಲಸ ಕಾರ್ಯಗಳು ಏನೇ ನಡೆಯಬೇಕಿದ್ದರು ಇಂದೇ ಮಾಡಿಸಿಕೊಳ್ಳುವುದು ಉತ್ತಮ.