ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಮತ್ತು ಸಹ್ಯಾದ್ರಿ ಕಾಲೇಜು ತಂಡಗಳ ನಡುವಿನ 20:20 ಚಾಂಪಿಯನ್ ಟ್ರೋಫಿ ಪಂದ್ಯಾಕೂಟದಲ್ಲಿ ಸಿರಾಜ್ ಎರ್ಮಾಳ್ ನಾಯಕತ್ವದ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತಂಡವು ವಿಜಯಿಯಾಗಿ ಚಾಂಪಿಯನ್ ಟ್ರೋಫಿಯನ್ನು ತನ್ನದಾಗಿಸಿ ಕೊಂಡಿತು.
ದಿನಾಂಕ 03/03/2023 ರಂದು ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಏಕದಿನ ಟಿ20 ಪಂದ್ಯದಲ್ಲಿ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ೩ ವಿಕೆಟ್ ಅಂತರದ ಗೆಲುವು ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಸಹ್ಯಾದ್ರಿ ಕಾಲೇಜು ತಂಡವು ನಿಗದಿತ ಇಪ್ಪತ್ತು ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದು ಕೊಂಡು 151 ರನ್ ಗಳಿಸಿತು. ಕೋಸ್ಟಲ್ ತಂಡದ ಪರವಾಗಿ ಸಮೀರ್ ಲಕ್ಕಿಸ್ಟಾರ್ 3 ವಿಕೆಟ್ ಪಡೆದರೆ ಉಳಿದಂತೆ ಸಿರಾಜ್ ಎರ್ಮಾಳ್ ಹಾಗೂ ರಫೀಕ್ ಮಾಸ್ಟರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ವಿಜಯಿಯಾಗಲು 152 ರ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕೋಸ್ಟಲ್ ತಂಡಕ್ಕೆ ಕಪ್ತಾನ ಸಿರಾಜ್ ಎರ್ಮಾಳ್ 09 ಹಾಗೂ ಫೈಝಲ್ ಪೂಮಾರವರು 22 ಉತ್ತಮವಾದ ಆರಂಭಿಕ ಭಾಗೀದಾರಿಕೆಯನ್ನು ನೀಡಿದರು.ಮಧ್ಯಮ ಕ್ರಮಾಂಕದಲ್ಲಿ ತುಸು ಬಿಗು ದಾಳಿಯನ್ನು ನಡೆಸಿದ ಸಹ್ಯಾದ್ರಿ ತಂಡವು ಕೊನೇಗೆ ಇಮ್ತಿಯಾಝ್ ಹಜಾಜ್ 31,ರಿಯಾಝ್ ಶೈನ್ 27, ರಫೀಕ್ ಮಾಸ್ಟರ್ 19 ಹಾಗೂ ಸಿರಾಜ್ ಲಕ್ಕಿಸ್ಟಾರ್ 22 ರವರ ಬಿರುಸಿನ ಬ್ಯಾಟಿಂಗ್ ನಿಂದಾಗಿ ಅಂತಿಮವಾಗಿ 19.4 ಓವರ್ ನಲ್ಲಿ ಏಳು ವಿಕೆಟ್ ನಷ್ಟಕ್ಕೆ 152 ರನ್ನಿನೊಂದಿಗೆ ಗೆಲುವಿನ ಪತಾಕೆಯನ್ನು ಹಾರಿಸಿತು.
ಅಂತಿಮ ಎರಡು ಓವರಿನಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿ 22 ರನ್ ಕಲೆ ಹಾಕಿದ ಕೋಸ್ಟಲ್ ತಂಡದ ಸಮೀರ್ ಲಕ್ಕಿಸ್ಟಾರ್ ರವರು ಉತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಪಡೆದರೆ,ಸಹ್ಯಾದ್ರಿ ಕಾಲೇಜು ತಂಡದ ಪರವಾಗಿ ಮೂರು ವಿಕೆಟ್ ಪಡೆದು ಉತ್ತಮ ದಾಳಿ ನಡೆಸಿದ ಭುವಿತ್ ಕುಳಾಲ್ ರವರು ಅರ್ಹವಾಗಿ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.