ಕುಂಬ್ರ: ಕಳೆದ ಎರಡು ದಿನಗಳ ಹಿಂದೆ ಕುಂಬ್ರ ಪೇಟೆಯಲ್ಲಿ SDPI ಬೆಂಬಲಿತ ಅಭ್ಯರ್ಥಿ ಶಾಫಿ ಬೆಳ್ಳಾರೆ ರವರ ಪರವಾಗಿ ಹಾಕಿದ್ದ ಬ್ಯಾನರ್ ರಾತ್ರೋ ರಾತ್ರಿ ಕಾಣೆಯಾಗಿತ್ತು.
ಈ ಬಗ್ಗೆ ಗೊಂದಲ ಉಂಟಾಗಿ ಹಲವು ಊಹಾಪೋಹಗಳು ಹರಿದಾಡಿದ್ದು ಘಟನೆಯ ಬಗ್ಗೆ ಗಂಭೀರತೆ ಅರಿತ SDPI ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತದ ನಂತರ ಪತ್ರಿಕೆಗಳಲ್ಲಿ ಈ ಬಗ್ಗೆ ವರದಿಗಳು ಬಂದಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಕುಂಬ್ರ ಪೇಟೆಯಲ್ಲಿರುವ ಸಿಸಿ ಕ್ಯಾಮಾರ ಪರಿಶೀಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.ಕುಂಬ್ರದಲ್ಲಿ ಕಳೆದ ತಿಂಗಳಿನಿಂದ ಹಲವು ಬೇರೆ ಬೇರೆ ರೀತಿಯ ಘಟನೆಗಳು ಸಂಭವಿಸಿದ್ದು ಇಲ್ಲಿರುವ ಸಿಸಿ ಕ್ಯಾಮಾರದಲ್ಲಿ ಇದ್ಯಾವುದು ಕಾಣ ಸಿಗದಿರುವುದು ಅಚ್ಚರಿಯ ಸಂಗತಿ ಎನ್ನಬಹುದು.
ಪ್ರತ್ಯಕ್ಷವಾದದ್ದು ಹೇಗೆ: ಕುಂಬ್ರದಲ್ಲಿ ಎರಡು ಪಕ್ಷದ ಬ್ಯಾನರನ್ನು ಹಾಕಲು ಪುತ್ತೂರಿನ ಒಂದೇ ತಂಡಕ್ಕೆ ಕಾಂಟ್ರಾಕ್ಟ್ ಕೊಟ್ಟಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಮುಗಿದ ನಂತರ ಅಂದು ರಾತ್ರಿಯೇ ಬ್ಯಾನರನ್ನು ತೆರವು ಮಾಡುವ ಕಾರ್ಯ ನಡೆದಿತ್ತು. ಇದರಲ್ಲಿ ಎರಡು ಪಕ್ಷಗಳ ಬ್ಯಾನರಿನ ಮಧ್ಯದಲ್ಲಿದ್ದ SDPI ಬೆಂಬಲಿತ ಬ್ಯಾನರನ್ನು ಅದೇ ತಂಡದವರು ರಾತ್ರಿ ಹೊತ್ತಾದ ಕಾರಣ ಅರಿವಿಲ್ಲದೇ ಬಿಚ್ಚಿ ಅದೇ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದು ಮರುದಿನ ಪತ್ರಿಕೆಯ ವರದಿ ಕಂಡಾಗ ತಂಡಕ್ಕೆ ವಿಷಯ ಅರಿತಿದ್ದು ತದನಂತರ ಅದನ್ನು ಯಥಾವತ್ತಾಗಿ ಇದ್ದ ಸ್ಥಳಕ್ಕೆ ತಂದು ಜೋಡಿಸಿದ್ದಾರೆ.
ಬ್ಯಾನರನ್ನು ತೆರವುಗೊಳಿಸಿದ್ದ ಇಬ್ಬರನ್ನು ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದು ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದು ಈ ಬಗ್ಗೆ ನೀಡಿದ್ದ ಪ್ರಕರಣವನ್ನು ಸಂತ್ಯಾಂಶವನ್ನು ಅರಿತ ನಂತರ ಹಿಂಪಡೆದಿರುತ್ತೇನೆ ಎಂದು SDPI ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ರವರು ಡಿಟಿವಿಗೆ ತಿಳಿಸಿದ್ದಾರೆ.