ಕಾಸರಗೋಡು: ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮನೆಯವರನ್ನು ಬೆಚ್ಚಿ ಬೀಳಿಸಿದ ಘಟನೆಯು ಕಾಸರಗೋಡಿನ ಬಂದ್ಯಿಡ್ಕದಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿನಿಯನ್ನು ಬಂದ್ಯಡ್ಕ ಮಾಲಕುಂಡ ಇಲ್ಲತಿಂಗಲ್ ನ ಕೆ. ವಿ ಶರಣ್ಯ (17) ಎಂದು ತಿಳಿದು ಬಂದಿದೆ.ಇವರು ಬಂದ್ಯಡ್ಕ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳೆಂದು ತಿಳಿದು ಬಂದಿದೆ.
ಕೆಲಸ ಮುಗಿಸಿ ತಾಯಿ ಸುಜಾತಾ ಸಂಜೆ ಮನೆಗೆ ಬಂದಾಗ ಶರಣ್ಯ ನಾಪತ್ತೆಯಾಗಿದ್ದು, ಕಿಟಿಕಿ ಮೂಲಕ ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಮನೆಯ ಒಂದು ಕೋಣೆಯಲ್ಲಿ ಪತ್ತೆಯಾಗಿದ್ದಾಳೆ.
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಂಚದಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿದ್ದಳು ಮತ್ತು ಕೋಣೆಯ ಬಾಗಿಲುಗಳು ಮುಚ್ಚಿದ ಸ್ಥಿತಿಯಲ್ಲಿತ್ತು.
ಅಕ್ಕಪಕ್ಕದವರಿಗೆ ಮಾಹಿತಿ ತಿಳಿದು ಅವರು ಪೊಲೀಸರಿಗೆ ಮಾಹಿತಿ ನೀಡದ್ದಾರೆ. ಈ ಬಗ್ಗೆ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕಾಗಿದೆ.