';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪ್ಪಾಡಿ ಗ್ರಾಮದ ಅಂಗಾರಗುಡ್ಡೆ ಎಂಬಲ್ಲಿ ಅಕ್ರಮ ಗೋವಿನ ಅಡ್ಡೆ ಇದೆ ಎಂದರಿತ ಹಿಂದೂ ಸಂಘಟನೆಯ ಯುವಕರು ಸುಮಾರು 19 ಗೋವುಗಳನ್ನು ರಕ್ಷಣೆ ಮಾಡಿದ ಬಗ್ಗೆ ವರದಿಯಾಗಿದೆ.
ಈ ಅಕ್ರಮ ಗೋ ಅಡ್ಡೆಯು ಸಂಶುದ್ದೀನ್ ಎಂಬವರಿಗೆ ಸೇರಿದ್ದು ಗೋವಿನ ಜೊತೆಗೆ ಅವರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆಂಬ ಮಾಹಿತಿಯು ದೊರೆತಿದೆ.
ಮಾಲಕ ಸಂಶುದ್ದೀನ್ ಸುಮಾರು 19 ಗೋವುಗಳನ್ನು ಮಾಂಸ ಮಾಡಲು ತಂದಿರುವ ಬಗ್ಗೆ ಮಾಹಿತಿ ಪಡೆದಿದ್ದ ಹಿಂದೂ ಸಂಘಟನೆಯವರು ಅದನ್ನು ಮೇಯಲು ಬಿಟ್ಟಿದ್ದ ಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆದು ಹಿಂದೂ ಸಂಘಟನೆಗಳಾದ ಭಜರಂಗ ದಳ ಮತ್ತು ಹಿಂದೂ ಯುವ ಸೇನೆ ಸ್ಥಳವನ್ನ ಪತ್ತೆ ಹಚ್ಚಿ ಪರಿಶೀಲಿಸಿದಾಗ ಮಾಲಕ ಸಂಶಯಾತ್ಮಕ ರೀತಿಯಲ್ಲಿ ವರ್ತಿಸಿದ ಹಿನ್ನೆಲೆಯಲ್ಲಿ ಕೂಡಲೇ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದು ಮಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮುಲ್ಕಿ ಪೊಲೀಸರು ಬಂಧಿತ ಸಂಶುದ್ದೀನ್ ನನ್ನು ವಿಚಾರಣೆ ನಡೆಸುತ್ತಿದ್ದು.ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>