2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 – 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ ದಿನವೇ ಕಾಂಗ್ರೆಸ್ 124 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಮುಖವಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲ ಮೂಡಿಸಿತ್ತು. ಈಗ ಸಿದ್ದರಾಮಯ್ಯ ವರುಣಾದಿಂದಲೇ ಸ್ಪರ್ಧಿಸುವುದು ಸ್ಪಷ್ಟವಾಗಿದೆ. ಅಲ್ಲದೆ, ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರದ ಅಭ್ಯರ್ಥಿ ಹೆಸರಿಲ್ಲ. ಸಿದ್ದರಾಮಯ್ಯ 2 ಕ್ಷೇತ್ರ ಸ್ಪರ್ಧೆ ಸುಳಿವು ಬೆನ್ನಲ್ಲೇ ಮೊದಲ ಪಟ್ಟಿಯಲ್ಲಿ ಕೋಲಾರ, ಬಾದಾಮಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿರದಿರುವುದು ಕುತೂಹಲ ಮೂಡಿಸಿದೆ.
ಅಲ್ಲದೆ, ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ಗೆ ಟಿಕೆಟ್ ಘೋಷಿಸಲಾಗಿದ್ದು, ದರ್ಶನ್ ಧ್ರುವನಾರಾಯಣಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ಘೋಷಿಸಲಾಗಿದೆ. ಇನ್ನು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕೆ.ಎಚ್.ಮುನಿಯಪ್ಪಗೆ ಟಿಕೆಟ್ ನೀಡಲಾಗಿದ್ದರೆ, ರಾಜಕೀಯ ನಿವೃತ್ತಿ ಘೋಷಿಸಿದ್ದ ತನ್ವೀರ್ ಸೇಠ್‌ಗೆ ಮತ್ತೆ ಟಿಕೆಟ್ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರ ಫೈನಲ್ ಆಗಿದೆ. ಡಿ.ಕೆ ಶಿವಕುಮಾರ್ ಕನಕಪುರ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರ, ಶಾಮನೂರು ಶಿವಶಂಕ್ರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಎಂ. ಬಿ ಪಾಟೀಲ್ ಅವರಿಗೆ ಬಬಲೇಶ್ವರ ಟಿಕೆಟ್ ನೀಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಅಭ್ಯರ್ಥಿಗಳ ವಿವರ ಹೀಗಿದೆ
ಸಿದ್ದರಾಮಯ್ಯ -ವರುಣಾ
ಶಾಮನೂರು ಶಿವಶಂಕ್ರಪ್ಪ -ದಾವಣಗೆರೆ ದಕ್ಷಿಣ
ಎಂ. ಬಿ. ಪಾಟೀಲ್ -ಬಬಲೇಶ್ವರ
ಡಿ.ಕೆ. ಶಿವಕುಮಾರ್ -ಕನಕಪುರ
ಲಕ್ಷ್ಮೀ ಹೆಬ್ಬಾಳ್ಕರ್ -ಬೆಳಗಾವಿ ಗ್ರಾಮೀಣ
ಗಣೇಶ ಹುಕ್ಕೇರಿ -ಚಿಕ್ಕೋಡಿ, ಸದಲಗಾ
ಭರಮಗೌಡ ಅಲಗೌಡ ಕಾಗೆ -ಕಾಗವಾಡ
ಮಹೇಂದ್ರ ಕೆ ತಮ್ಮಣ್ಣವರ್ -ಕುಡಚಿ
ಸತೀಶ್ ಜಾರಕಿಹೊಳಿ -ಯಮಕನಮರಡಿ
ಅಂಜಲಿ ನಿಂಬಾಳ್ಕರ್ -ಖಾನಾಪುರ
ದಿನೇಶ್ ಗುಂಡುರಾವ್ -ಗಾಂಧಿನಗರ (ಬೆಂಗಳೂರು)
ಜಮೀರ್ ಅಹ್ಮದ್ -ಚಾಮರಾಜಪೇಟೆ
ರಾಮಲಿಂಗಾರೆಡ್ಡಿ – ಬಿಟಿಎಂಲೇಔಟ್
ಬೆಳ್ತಂಗಡಿ: ರಕ್ಷಿತ್ ಶಿವರಾಮ್
ಉಳ್ಳಾಲ: ಯುಟಿ ಖಾದರ್
ಮೂಡಬಿದಿರೆ: ಮಿಥುನ್ ರೈ
ಬಂಟ್ವಾಳ: ರಮನಾಥ ರೈ
ಸುಳ್ಯ: ಕೃಷ್ಣಪ್ಪ ಜಿ