ಸುಳ್ಯ: ಕೆಲಸ ಮಾಡುತ್ತಿದ್ದಾಗ ಗುಡ್ಡ ಜರಿದು ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಸುಳ್ಯ ಸಮೀಪದ ಗುರಂಪು ಎಂಬಲ್ಲಿ ಇದೀಗ ಸಂಭವಿಸಿದೆ.

ಗುರುಂಪು ಬಳಿ ಮನೆಯ ಕಾಮಗಾರಿ ವೇಳೆ ಬರೆ ಜರಿದು ಕೆಲವು ಮಂದಿ ಮಣ್ಣಿನಡಿ ಸಿಲುಕಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ ಸೇರಿಂದತೆ ಅಧಿಕಾರಿಗಳು ಧಾವಿಸಿದ್ದು, ಕಾರ್ಯಾಚಾರಣೆ ಮುಂದುವರೆದಿದೆ.
ಮನೆಯ ಹಿಂಭಾಗದಲ್ಲಿ ದೊಡ್ಡ ಬರೆ ಇದ್ದು ಅದರ ಪಕ್ಕದಲ್ಲಿ ಬಿಲ್ಡಿಂಗ್ ಕನ್ಸ್ಟ್ರಕ್ಷನ್ ಪಿಲ್ಲರ್‌ಗಳ ಕಾಮಾಗಾರಿ ಕೆಲಸ ನಡೆಯಿತ್ತಿದ್ದು ಈ ಸಂದರ್ಭದಲ್ಲಿ ಈ ಒಂದು ಬರೆ ಜರಿದು ಬಿದ್ದಿದ್ದು ಅದರಡೆಯೆಲ್ಲಿ ಹಲವರು ಸಿಲುಕಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾರೆ.


ಈಗಾಗಲೇ ಮಣ್ಣನ್ನು ತೆರವು ಗೊಳಿಸುವ ಕಾರ್ಯವು ನಡೆಯುತ್ತಿದ್ದು ಮಣ್ಣಿನಡಿಯಲ್ಲಿ ಸಿಲುಕಿದ್ದ ಒರ್ವವನನ್ನು ಮೇಲೆತ್ತಿದ್ದು ಆದರೆ ಅದಾಗಲೇ ಆ ವ್ಯಕ್ತಿಯು ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಇನ್ನಿಬ್ಬರು ಮಣ್ಣಿನಡಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿಯಿದ್ದು ಅವರನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದು ಸುಳ್ಯದಲ್ಲಿ ಇದೊಂದು ಬಹುದೊಡ್ಡ ದುರಂತವೇ ಅನ್ನಬಹುದು.ವೀಡಿಯೋ ನೋಡಿ👇👇