dtvkannada

ಚಿಕ್ಕಮಗಳೂರು: ನೋಡು ನೋಡುತ್ತಿದ್ದಂತೆ ಹಾಡ ಹಗಲೇ ಪುಟ್ಟ ಮಗುವನ್ನು ಅಪಹರಿಸಲು ಯತ್ನಿಸಿದ್ದು ಅದೃಷ್ಟವಶಾತ್ ಇದು ವಿಫಲ ಯತ್ನವಾಗಿದೆ. ಈ ಒಂದು ಘಟನೆಯು ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿ ಭಾನುವಾರ ಸಂಜೆ 6.38ರ ವೇಳೆಗೆ ಬಾಲಕನ ಅಪಹರಣಕ್ಕೆ ಯತ್ನ ನಡೆದಿದೆ ಎನ್ನಲಾಗಿದೆ.

ಫುಟ್‌ಪಾತ್‌ನಲ್ಲಿ ಗೆಳೆಯರ ಜತೆಗೆ ಆಟವಾಡುತ್ತಿದ್ದ ಮಗುವನ್ನು ಅಪಹರಿಸಲು ಒಬ್ಬ ಅಪರಿಚಿತ ಯತ್ನಿಸಿದ್ದಾನೆ.ಅಪಹರಿಸಿ ಹೆಗಲ ಮೇಲೆ ಎತ್ತಿಕೊಂಡು ವ್ಯಕ್ತಿ ವೇಗವಾಗಿ ಮುನ್ನಡೆದಿದ್ದು, ಬಾಲಕ ನುಸುಳಿಕೊಂಡು ಹೆಗಲಿನಿಂದ ಕೆಳಗೆ ಹಾರಿ ಚಾಣಾಕ್ಷತೆಯಿಂದ ಎಸ್ಕೆಪ್ ಆಗಿದ್ದಾನೆ.

ಸಾಹಸ ಮೆರೆದು ಧೈರ್ಯ ಪ್ರದರ್ಶಿಸಿದ ಬಾಲಕ ಯುಕೆಜಿ ವಿದ್ಯಾರ್ಥಿಯಾಗಿದ್ದು, ಬಾಲಕನ ಸಮಯಸ್ಪೂರ್ತಿಗೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸಿನಿಮಿಯ ರೀತಿಯಲ್ಲಿ ನಡೆದಿರುವ ಈ ಘಟನೆ ಜನನಿಬಿಡ ಪ್ರದೇಶದಲ್ಲೇ ನಡೆದಿದ್ದರೂ ತಟ್ಟನೆ ಯಾರ ಗಮನಕ್ಕೂ ಬಂದಿಲ್ಲ.

ಅಪಹರಣಕ್ಕೆ ಯತ್ನಿಸಿದ ವ್ಯಕ್ತಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಇದೀಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದ್ದು, ಮಕ್ಕಳು ಮನೆಯ ಹೊರಗೆ ಆಡುತ್ತಿರುತ್ತಾರೆ.ಮಕ್ಕಳನ್ನು ಹೊರಗೆ ಬಿಡುವ ಮುನ್ನ ಪೋಷಕರು ಹುಷಾರಾಗಿರುವಂತೆ ಈ ಘಟನೆ ಎಚ್ಚರಿಸಿದೆ ಎನ್ನಬಹುದು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!