ಬೆಂಗಳೂರು: ಮನೆಯಲ್ಲಿ ಮಲಗಿದ್ದ ನವಜಾತ ಹೆಣ್ಣು ಮಗುವನ್ನ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಗು ಕಳ್ಳತನ ಮಾಡಿದ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದು ಈಕೆಯ ಭಯಾನಕ ಹಿಸ್ಟರಿ ಬಯಲಾಗಿದೆ. ಈ ಮಕ್ಕಳ ಕಳ್ಳಿ ಕಳ್ಳತನ ಮಾಡಲು ಮನೆಗೆ ಎಂಟ್ರಿ ಕೊಡುವ ರೀತಿ ಕೇಳಿದ್ರೆ ಎಂತವರೂ ಶಾಕ್ ಆಗ್ತಾರೆ. ಈಕೆ ಮನೆ ಬಾಗಿಲಿಗೆ ಡೋನೆಷನ್ ಕೇಳ್ಕೊಂಡು ಬಂದು ಪುಟ್ಟ ಪುಟ್ಟ ಮಕ್ಕಳನ್ನು ಕಳ್ಳತನ ಮಾಡುತ್ತಿದ್ದಳಂತೆ. ಈ ಹಿಂದೆ ಸಣ್ಣ ಪುಟ್ಟ ಪ್ರಕರಣಗಳಲ್ಲಿ ನಂದಿನಿ ಅಲಿಯಾಸ್ ಆಯೇಷಾ ಪೊಲೀಸರ ಅತಿಥಿಯಾಗಿದ್ದಳು.
ಡೋನೆಷನ್ ಕೇಳ್ಕೊಂಡು ಮನೆ ಬಾಗಿಲಿಗೆ ಬಂದರೆ ಎಚ್ಚರ;
ಕಳ್ಳಿ ಆಯೇಷಾ, ಯಾವುದೋ ಒಂದು ಸಂಸ್ಥೆಯ ಬ್ರೋಷರ್ ಹಿಡ್ಕೊಂಡು ಮನೆ ಬಾಗಿಲು ತಟ್ಟುತ್ತಿದ್ದಳು. ಈ ಸಂಸ್ಥೆಗೆ ಧನ ಸಹಾಯ ಮಾಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು. ನೀವು ಹಣ ತರಲು ಒಳಗೆ ಹೋದ್ರೆ ನಿಮ್ಮ ಮನೆಯಲ್ಲಿರುವ ವಸ್ತುಗಳು ಅಥವಾ ಮಗುವನ್ನು ಕದ್ದು ಪರಾರಿಯಾಗುತ್ತಿದ್ದಳು. ಈಕೆ ಹೆಚ್ಚಾಗಿ ಬುರ್ಖಾ ಹಾಕಿಕೊಂಡೆ ಮನೆಗಳಿಗೆ ಎಂಟ್ರಿ ಕೊಡ್ತಾಳೆ. ಹೀಗಾಗಿ ಸಿಸಿಟಿವಿಯಲ್ಲೂ ಈಕೆ ಯಾರು ಅನ್ನೋದೆ ಗೊತ್ತಾಗೋದಿಲ್ಲ. ಈ ಹಿಂದೆ ಮೊಬೈಲ್, ಹಣ ಕದ್ದು ಎಸ್ಕೇಪ್ ಆಗ್ತಿದ್ದಳು. ಅಲ್ಲದೆ ರಾತ್ರಿಯಾಗ್ತಿದ್ದಂತೆ ಚಾಕು, ಚೂರಿ ತೋರಿಸಿ ರಾಬರಿ ಕೂಡ ಮಾಡುತ್ತಿದ್ದಳು. ಈಗ ಮಕ್ಕಳನ್ನೂ ಕದಿಯುತ್ತಿದ್ದಾಳೆ.
ಈ ಹಿಂದೆ ಕೂಡ ಹಲವು ಮಕ್ಕಳನ್ನ ಕಳ್ಳತನ ಮಾಡಿರುವ ಬಗ್ಗೆಯೂ ಪೊಲೀಸರಿಗೆ ಅನುಮಾನ ಬಂದಿದೆ. ಸದ್ಯ ಈಗ ಕದ್ದ ಮಗುವನ್ನ ಯಾರಿಗೆ ಕೊಡ್ತಿದ್ಲೂ ಅನ್ನೋದನರ ಬಗ್ಗೆ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ.
ನಂದಿನಿ ಅಲಿಯಾಸ್ ಆಯೇಷಾ ಇತ್ತೀಜೆಗೆ ಕದ್ದಿದ್ದ ಮಗುವನ್ನ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಳು. ಒಂದು ತಿಂಗಳ ಮಗುವಿಗೆ ಹಾಲು ಕೊಡೋದರ ಬದಲು ಉಪ್ಪಿಟ್ಟು ಕೊಟ್ಟಿದ್ದಳು. ಮಗು ಅಳುವುದನ್ನ ನೋಡಿದ ಸ್ಥಳೀಯರು ಅನುಮಾನಗೊಂಡು ಮನೆಗೆ ನುಗ್ಗಿ ಮಗುವನ್ನ ಹುಡುಕಲು ಸಹಾಯ ಮಾಡಿದ್ದಾರೆ. ಸದ್ಯ ಚಾಲಾಕಿ ಕಳ್ಳಿಯನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.