dtvkannada

ಮಂಗಳೂರು: ಬಹುಮಹಡಿ ಕಟ್ಟಡದ ಮೇಲೆ ಎಸಿ‌ ಮೆಕ್ಯಾನಿಕ್ ಒರ್ವ ಕೆಸ ಮಾಡುತ್ತಿದ್ದ ‌ಸಂದರ್ಭ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳೂರು ನಗರದ ನಂತೂರ್‌ನ ಫ್ಲ್ಯಾಟ್ ಒಂದರಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಘಟನೆಯಲ್ಲಿ ಮೃತಪಟ್ಟ ಯುವಕನನ್ನು ವಿನಯ್ ತಾವ್ರೋ (೨೨) ಎಂದು ಗುರುತಿಸಲಾಗಿದೆ.

ಇಂದು ಸಂಜೆ ಸುಮಾರು 6 ಗಂಟೆಗೆ ನಂತೂರ್‌ನ ಮಾಂಟ್ ಟಿಯರಾ ಎಂಬ ಫ್ಲ್ಯಾಟ್‌ನ 9 ನೇಯ ಮಹಡಿಯಲ್ಲಿ ಎ.ಸಿ ಮೆಷೀನ್ ರಿಪೇರಿ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದಾರೋ ಅಥವಾ ಬಿಸಿಲಿನ ಭೇಗೆ ಅಥವಾ ತಲೆ ತಿರುಗಿ ಬಿದ್ದು ಬಿಟ್ಟರೋ ಗೊತ್ತಿಲ್ಲ ಅಂತು ಬಿದ್ದ ರಭಸಕ್ಕೆ ತಲೆ ನೆರವಾಗಿ ಇಂಟರ್ಲಾಕಿಗೆ ಬಡಿದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!