ಪುತ್ತೂರು: ದಿನದಿಂದ ದಿನಕ್ಕೆ ಪುತ್ತೂರು ಕಾಂಗ್ರೆಸ್ ಪಾಲಾಯದಲ್ಲಿ ಬದಲಾವಣೆ ಕಾಣುತ್ತಿದ್ದು ಈದೀಗ ಮಹತ್ತರವಾದ ಮಾತೊಂದು ಕೇಳಿಬರುತ್ತಿದೆ.

ಕಾಂಗ್ರೆಸ್ ಪಕ್ಷದಲ್ಲಿ ಹೊಸಬರಿಗೆ ಟಿಕೆಟ್ ಘೋಷಣೆ ಮಾಡಿದ್ದೇ ಆದರೆ ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕವಾಗಿ ತಮ್ಮ ಪಕ್ಷದ ಜವಾಬ್ದಾರಿ ಹುದ್ದೆಗಳಿಗೆ ರಾಜಿನಾಮೆ ನೀಡುವ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.ಇದರಲ್ಲಿ ಪಂಚಾಯತ್ ಸದಸ್ಯರು ಹಾಗೂ ಪಕ್ಷದಲ್ಲಿ ಜವಾಬ್ದಾರಿ ಸ್ಥಾನ ಹೊತ್ತಿರುವವರು ಸೇರಿದ್ದಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೊಸಬರನ್ನು ಹೊರತು ಪಡಿಸಿ ಹುಟ್ಟು ಕಾಂಗ್ರೆಸಿಗರು ಯಾರಿದ್ದಾರು ಅವರಲ್ಲಿ ಯಾರಿಗೂ ಬೇಕಾದರು ಟಿಕೆಟ್ ನೀಡಿದರೂ ನಮ್ಮೆಲ್ಲರ ಬೆಂಬಲವಿದ್ದು ಅದು ಹೊರತು ಪಡಿಸಿ ಹೊಸಬರಿಗೆ ಪಕ್ಷ ಮನಸ್ಸು ಮಾಡಿದಲ್ಲಿ ಹುಟ್ಟು ಕಾಂಗ್ರೆಸಿಗಾರದ ನಮಗೆ ಮಾಡುವ ಅವಮಾನವಾಗಿದ್ದು ಅವರೆಲ್ಲರೂ ಸಾಮೂಹಿಕವಾಗಿ ರಾಜಿನಾಮೆ ನೀಡುವ ಬಗ್ಗೆ ಸಿದ್ದತೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಎಲ್ಲಿಯಾದರು ಇದೇ ರೀತಿ ಸಂಭವಿಸಿದ್ದೆ ಆದಲ್ಲಿ ಪುತ್ತೂರಿನಲ್ಲಿ ನಿರಾಯಾಸವಾಗಿ ಬಿಜೆಪಿ ಪಕ್ಷ ಗೆದ್ದು ಬೀಗುವುದರಲ್ಲಿ ಸಂಶಯವಿಲ್ಲ ಎಂಬುವುದು ಮಾತ್ರ ಸತ್ಯಕ್ಕೆ ಹತ್ತಿರವಾದ ಮಾತು.

ಇದೀಗ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದ ಹದಿನಾಲ್ಕು ಮಂದಿಯ ಹೆಸರಿನಲ್ಲಿ ಕೆಪಿಸಿಸಿ ಮತ್ತು ಎಐಸಿಸಿ ಇಬ್ಬರ ಹೆಸರನ್ನು ಫೈನಲ್ ಮಾಡಿದ್ದು ಒರ್ವ ಹುಟ್ಟು ಕಾಂಗ್ರೆಸಿಗಾರಾದ ಹೇಮನಾಥ್ ಶೆಟ್ಟಿಯಾದರೆ ಇವರ ಹೆಸರಿನ ಜೊತೆಗೆ ಕೆಲ ತಿಂಗಳ ಹಿಂದೆ ಕಾಂಗ್ರೆಸಿಗೆ ಸೇರ್ಪಡೆಯಾದ ಅಶೋಕ್ ರೈಯವರ ಹೆಸರು ಪೈಪೋಟಿಯಲ್ಲಿದ್ದು ಇವರಿಬ್ಬರಲ್ಲಿ ಯಾರಿಗಾದರೂ ಒಬ್ಬರಿಗಂತೂ ಟಿಕೆಟ್ ಘೋಷಿಸುವುದರಲ್ಲಿ ಸಂಶಯವಿಲ್ಲ ಎಂದು ತಿಳಿದು ಬಂದಿದೆ.ಯಾವುದಕ್ಕೂ ಹೈಕಮಾಂಡಿನ ತೀರ್ಮಾನ ಯಾವ ರೀತಿ ಬರುತ್ತೆ ಎಂಬುವುದು ಕಾದು ನೋಡಬೇಕಿದೆ.