ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ತನಿಷಾ ಕುಪ್ಪಂಡ ಇದೀಗ ‘ಪೆಂಟಗನ್’ ಸಿನಿಮಾದಲ್ಲಿ ಹಾಟ್ ಆಗಿ, ಬೋಲ್ಡ್ ಲುಕ್‌ನಲ್ಲಿ ಲಿಪ್‌ಲಾಕ್, ಬ್ಯಾಕ್‌ಲೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕತೆಗಳಿರುವ, ಐದು ಮಂದಿ ನಿರ್ದೇಶಕರಿಂದ ಮೂಡಿಬಂದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಸದ್ಯ ಈಗ ನಟಿ ತನಿಷಾ ಮುಜುಗರದ ಸನ್ನಿವೇಶವನ್ನು ಎದುರಿಸಿದ್ದಾರೆ. ಹಾಗೂ ಯೂಟ್ಯೂಬರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಟಿ ತನಿಷಾ ಅವರಿಗೆ ಯೂಟ್ಯೂಬರ್, ನೀವು ನ್ಯೂಡ್ ಫಿಲಂ ಮಾಡ್ತೀರಾ ಅಂತ ಪ್ರಶ್ನೆ ಕೇಳಿ ಕೆರಳಿಸಿದ್ದಾನೆ. ನ್ಯೂಡ್ ಮಾಡೋದು ಪೋರ್ನ್ ಸ್ಟಾರ್ ಮಾಡ್ತಾರೆ ಅಂತ ನಟಿ ತನಿಷಾ ಗರಂ ಆಗಿದ್ದಾರೆ. ಏಪ್ರಿಲ್ 7ರಂದು ತನಿಷಾ ನಟನೆಯ ಪೆಂಟಗನ್ ಸಿನಿಮಾ ರಿಲೀಸ್ ಆಗುತ್ತಿದ್ದು ನಟಿಯ ಇಂಟರ್ವೀವ್ ಮಾಡಲು ಬಂದಿದ್ದ ಯೂಟ್ಯೂಬರ್ ಈ ರೀತಿ ಪ್ರಶ್ನೆ ಕೇಳಿ ಪೇಜೆಗೆ ಸಿಲುಕಿದ್ದಾನೆ. ಈ ವೇಳೆ ನಟಿ ಗರಂ ಆಗಿದ್ದು ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ನ್ಯೂಡ್ ಫಿಲಂ ಮಾಡೋಕೆ ಆಗುತ್ತಾ? ನಾವು ಪೋರ್ನ್ ಸ್ಟಾರ್ ಅಲ್ಲ. ಮಾತನಾಡುವ ಮುನ್ನ ಎಚ್ಚರ ಇರಲಿ. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವ ನಟಿಯೂ ಪೋರ್ನ್ ಮಾಡಿಲ್ಲ. ಈ ರೀತಿ ಅಸಭ್ಯವಾಗಿ ಮಾತನಾಡಬೇಡಿ ಎಂದಿದ್ದಾರೆ.
ಇನ್ನು ಕಾಮನ ಬಿಲ್ಲು ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದ ನಟಿ ತನಿಷಾಗೆ ಬೆತ್ತಲೆ ಸಿನಿಮಾ ಮಾಡ್ತೀರಾ ಅಂತ ಯೂಟ್ಯೂಬರ್ ಕೇಳಿದ್ದು ಅನೇಕರನ್ನು ಕೆರಳಿಸಿದೆ. ಈ ವೇಳೆ ತನಿಷಾ ಹಾಗು ಚಿತ್ರತಂಡ ಯೂಟ್ಯೂಬರ್ ಮೇಲೆ ಆಕ್ರೊಶ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ನ್ಯೂಡ್ ಫಿಲ್ಮ್ ಮಾಡಲು ರೆಡಿ ಇದ್ದೀರಾ ಎಂದು ನಟಿಗೆ ಕೇಳಿದ್ದಾನೆ. ನಾನು ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಅದರ ಅರ್ಥ ನಾನು ನ್ಯೂಡ್ ಫಿಲ್ಮ್ ಮಾಡಬೇಕೆಂದಿಲ್ಲ. ಹಾಗೆ ಮಾಡಿದ್ದರೆ ನಾನು ಕನ್ನಡ ಫಿಲ್ಮ್ ನಲ್ಲಿ ಇರಬೇಕಿಲ್ಲ. ನಾನು ಆ ಕ್ಷೇತ್ರಕ್ಕೆ ಹೋಗಬೇಕು. ನೀವು ಏನು ಪ್ರಶ್ನೆ ಕೇಳ್ತಾ ಇದ್ದೀರಾ? ಕಾಮನ್ ಸೆನ್ಸ್ ಇಲ್ವಾ? ಎಂದು ನಟಿ ಯೂಟ್ಯೂಬರ್ ಗೆ ತರಾಟೆ ತೆಗೆದುಕೊಂಡ ವೀಡಿಯೋ ಇದೀಗ ವೈರಲ್ ಆಗಿದೆ.