ಕ್ಯಾಲಿಕಟ್: ಕೋಝಿಕ್ಕೋಡ್ ನಲ್ಲಿ ಗರ್ಭಿಣಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿಗಳೆನ್ನುವ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.

ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಆಕೆಯ ಪತಿ ಜಮೀರ್ ಮತ್ತು ಅತ್ತೆ ನಫೀಸಾ ಅವರನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಐದು ತಿಂಗಳ ಗರ್ಭಿಣಿಯಾಗಿದ್ದ ಅಸ್ಮಿತಾ ಕಳೆದ ತಿಂಗಳ 13 ರಂದು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಅಸ್ಮಿನಾ ಅವರಿಗೆ ಪತಿ ಮತ್ತು ಕುಟುಂಬದವರು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕುಟುಂಬದವರು ತೊಟ್ಟಿಲಪಾಲಂ ಪೊಲೀಸರಿಗೆ ದೂರು ನೀಡಿದ್ದು ಆದರೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆದರೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಳೆದ ದಿನ ಕ್ರಿಯಾ ಸಮಿತಿ ರಚಿಸಲಾಗಿತ್ತು.ಕೊಲೆ ಆರೋಪವೂ ಕೇಳಿ ಬರುತ್ತಿದ್ದು ಇದಾದ ನಂತರ ನಾದಪುರಂ ಡಿವೈಎಸ್ಪಿ ನೇತೃತ್ವದ ತಂಡ ಜಮೀರ್ ಮತ್ತು ಆತನ ತಾಯಿ ನಫೀಸಾ ಅವರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
ಕೌಟುಂಬಿಕ ಹಿಂಸಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.