';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಬಟ್ಟೆ ಮಳಿಗೆಗೆ ಬೆಂಕಿ ಬಿದ್ದು ಬೆಲೆ ಬಾಳುವ ಬಟ್ಟೆಗಳು ಬೆಂಕಿಗಾಹುತಿಯಾದ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯಲ್ಲಿರುವ ವಿವಾ ಫ್ಯಾಶನ್ ಗೆ ಬೆಂಕಿ ಬಿದ್ದಿದ್ದು ಹೊತ್ತಿ ಉರಿಯುತ್ತಿದೆ.
ಬಹು ಮಹಡಿ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯಲ್ಲಿ ಬಟ್ಟೆ ಶೋರೂಂ ಹೊಂದಿದ್ದು, ಬೆಳಗ್ಗೆ ಇದರೊಳಗಿನಿಂದ ಹೊಗೆ ಬರುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ಈ ಮಹಡಿಯ ನೆಲ ಅಂತಸ್ತಿನಲ್ಲಿ ಸೋನಾ ಅಪ್ಟಿಕಲ್ಸ್, ಆರ್ ಕೆ ಜ್ಯುವೆಲ್ಲರ್ ಸೇರಿದಂತೆ ಸುತ್ತಲೂ ಹಲವು ಅಂಗಡಿಗಳಿವೆ ಎನ್ನಲಾಗಿದೆ
ಇನ್ನು ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸೇರಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.