dtvkannada

'; } else { echo "Sorry! You are Blocked from seeing the Ads"; } ?>

ಇಸ್ತಾಂಬುಲ್: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ, ಸಾವಿರಾರು ಜನರ ಸಾವುನೋವಿಗೆ ಕಾರಣವಾಗಿದ್ದ ಟರ್ಕಿ ಮಹಾಭೂಕಂಪದಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದ ಪುಟಾಣಿ ಕಂದಮ್ಮ ಇದೀಗ ತನ್ನ ಹೆತ್ತಮ್ಮನ ಮಡಿಲು ಸೇರಿದ್ದು ಇಡೀ ಜಗತ್ತೇ ಖುಷಿಪಟ್ಟಿದೆ.

ಫೆಬ್ರವರಿ 13ರಂದು ಈ ಮಗುವಿನ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಈ ಮಗು ಬದುಕಿದ್ದು ಪವಾಡವೇ ಸರಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಇದೀಗ ಆ ಮಗುವಿನ ಅಮ್ಮನೂ ಜೀವಂತವಾಗಿರುವ ಸುದ್ದಿ ಬಂದಿದೆ.

ಟರ್ಕಿಯಲ್ಲಿ ಭಾರೀ ಭೂಕಂಪ ಸಂಭವಿಸಿದ ಬಳಿಕ ಅವಶೇಷಗಳಡಿಯಿಂದ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ “ಪವಾಡಸದೃಶ್ಯ ಕಂದಮ್ಮಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಹೃದಯಗಳನ್ನು ಗೆದ್ದಿತ್ತು.

ಈ ಪುಟ್ಟ ಮಗುವಿನ ಫೋಟೊ ವೈರಲ್ ಆಗಿತ್ತು. ಆದರೆ, ಭೂಕಂಪದಲ್ಲಿ ಪುಟ್ಟ ಕಂದಮ್ಮನ ತಾಯಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು.

'; } else { echo "Sorry! You are Blocked from seeing the Ads"; } ?>

ಆದರೆ, ಇದೀಗ ಬಂದ ವರದಿ ಪ್ರಕಾರ ಆ ಅಮ್ಮ ಜೀವಂತವಾಗಿದ್ದಾರೆ. ಭೂಕಂಪ ಸಂಭವಿಸಿದ 52 ದಿನಗಳ ಬಳಿಕ ಬದುಕಿ ಬಂದಿದ್ದಾರೆ. ಈಕೆ ಬದುಕಿ ಬಂದಿರುವ ಕುರಿತು ಸಚಿವ ಆಂಟನ್ ಗೆರಾಶ್ಚಿಂಕೊ ಸ್ಪಷ್ಟಪಡಿಸಿದ್ದಾರೆ.

“ಟರ್ಕಿಯಲ್ಲಿ ಭೂಕಂಪದ ನಂತರ 128 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಕಳೆದ ಮಗುವಿನ ಈ ಚಿತ್ರವನ್ನು ನೀವು ಬಹುಶಃ ನೆನಪಿಸಿಕೊಳ್ಳುತ್ತೀರಿ.

ಮಗುವಿನ ತಾಯಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು ಆದರೆ ಆ ತಾಯಿ ಜೀವಂತವಾಗಿದ್ದಾಳೆ.!

ಹೌದು ಆಕೆಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಸುಮಾರು 54 ದಿನಗಳ ಅಂತರ ಮತ್ತು ಡಿಎನ್ಎ ಪರೀಕ್ಷೆಯ ನಂತರ ಆ ಮಗು ಮತ್ತು ತಾಯಿ ಮತ್ತೆ ಒಟ್ಟಿಗೆ ಇದ್ದಾರೆ, “ಎಂದು ಅವರು ಟ್ವಿಟ್ ಮಾಡಿದ್ದಾರೆ.

ನೆಟ್ಟಿಗರು “ಇನ್ನೊಂದು ಪವಾಡ’ ಎಂದು ಕರೆದಿದ್ದಾರೆ. “ನೋವಿನ ಕತೆ, ಆದರೆ, ಈ ಕತೆ ಸುಂದರ ಅಂತ್ಯಕಂಡಿದೆ. ಮಗು ಮತ್ತು ತಾಯಿ ಒಂದಾಗಿರುವುದು ಆನಂದಬಾಷ್ಪ ತರಿಸಿದೆ” ಎಂದು ಟ್ವಿಟ್ಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!