ಕನಕಪುರ: ಇದ್ರಿಸ್ ರವರ ಗೋವು ಸಾಗಿಸುತ್ತಿದ್ದ ವಾಹನವನ್ನು ಶುಕ್ರವಾರ ಅಡ್ಡಗಟ್ಟಿ ದಾಳಿ ನಡೆಸಿದ ವೀಡಿಯೋ ಪುನೀತ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದ ಇದರ ಜಾಲ ಹಿಡಿದಾಗ ಪುನೀತ್ ಕೆರೆಹಳ್ಳಿಯೇ ಇದ್ರಿಸ್ ನನ್ನು ಕೊಂದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಕೊಲೆ ಮಾಡಿ ಮೂರು ದಿನಗಳು ಕಳೆದರೂ ಆರೋಪಿಯನ್ನು ಬಂದಿಸದೇ ಇದ್ದಾಗ ಸಾತನೂರು ಪೊಲೀಸ್ ಠಾಣೆಯ ಮುಂಬಾಗ ಇದ್ರಿಸ್ ಕುಟುಂಬಸ್ಥರ ಪ್ರತಿಭಟನೆಯ ಕಾವು ಹೆಚ್ಚಾಗುತ್ತಲೇ ಇದ್ದು.
ಸಾಮಾಜಿಕ ಜಾಲತಾಣಗಳಲ್ಲೂ ಪುನೀತ್ ಕೆರೆಹಳ್ಳಿಯ ಬಂಧಿಸಲು ಆಕ್ರೋಶ ವ್ಯಕ್ತವಾಗುತ್ತಿತ್ತು.

ಇದರ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ವೀಡಿಯೋವೊಂದು ಚಿತ್ರೀಕರಿಸಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್,ಡಿ ಕುಮಾರಸ್ವಾಮಿ ರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾನು ಕೊಲೆ ಮಾಡಿಲ್ಲ ನಾನು ಯಾರಿಗೂ ಹೆದರುವವನಲ್ಲ ಎಂದು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ ಇದರ ಬೆನ್ನಲ್ಲೇ ಇಂದು ಪುನೀತ್ ಮತ್ತು ಆತನ ಅನುಚರರಾದ 5 ಮಂದಿ ಆರೋಪಿಗಳನ್ನು ರಾಜಸ್ಥಾನದಲ್ಲಿ ಸಾತನೂರು ಪೊಲೀಸರು ಬಂಧಿಸಿದ್ದರು.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪುನೀತ್ ಕೆರೆಹಳ್ಳಿ ಬಗ್ಗೆ ನಾನ ರೀತಿಯ ಕಮೆಂಟ್ ಮತ್ತು ಪೊಷ್ಟರ್‌ಗಳು ಹರಿದಾಡುತ್ತಿದ್ದು “ತಪ್ಪು ಮಾಡಿಲ್ಲ ಅಂದಮೇಲೆ ರಾಜಸ್ತಾನಕ್ಕೆ ಒಂಟೆ ಕಾಯಕ್ಕ್ ಹೋಗವ್ನ” ಎಂದು ಪ್ರಶ್ನಿಸಿದ್ದಾರೆ. ಹಲವು ಕಮೆಂಟ್‌ಗಳು ಹರಿದಾಡುತ್ತಿದ್ದು ಆರೋಪಿಗಳ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.
ಬಂಧಿತ ಐದು ಆರೋಪಿಗಳು ಸಂಘಪರಿವಾರದ ಕಾರ್ಯಕರ್ತರೆಂದು ತಿಳಿದು ಬಂದಿದ್ದು ಬಂಧಿತರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.