ಪಾಲಕ್ಕಾಡ್: ಕಳೆದ ಐದು ವರ್ಷದ ಹಿಂದೆ ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ಕೇರಳ ರಾಜ್ಯವೇ ತಲೆ ತಗ್ಗಿಸುವಂತಾಗಿದ್ದ ಪ್ರಕರಣ ಆಹಾರದ ಪೊಟ್ಟಣ ಕದ್ದ ಎಂಬ ಕಾರಣಕ್ಕೆ ಆದಿವಾಸಿ ಯುವಕನನ್ನು ಥಳಿಸಿ ಕೊಲೆಗೈದ 13 ಆರೋಪಿಗಳಿಗೆ ಇದೀಗ ಕೇರಳದ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದಲ್ಲಿ ನ್ಯಾಯಾಲಯವು ಮೊದಲ ಆರೋಪಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಇತರ ಹನ್ನೆರಡು ಅಪರಾಧಿಗಳಿಗೆ 7 ವರ್ಷಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ ಎಂದು ತಿಳಿದು ಬಂದಿದೆ.
2018ರಲ್ಲಿ ಕೇರಳದ ಪಾಲಕ್ಕಾಡ್‌ನ ಅಟ್ಟಪ್ಪಾಡಿಯಲ್ಲಿ ಬುಡಕಟ್ಟು ಜನಾಂಗದ ಯುವಕ ಮಧು ಎಂಬಾತನನ್ನು ಕಿರಾಣಿ ಅಂಗಡಿಯಿಂದ ಅಕ್ಕಿ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಸಮೀಪದ ಕಾಡಿನಿಂದ ಹಿಡಿದು ಕರೆತಂದು ಕಟ್ಟಿಹಾಕಿ ಬರ್ಬರವಾಗಿ ಹೊಡೆದು ಕೊಂದು ಹಾಕಿದ್ದರು.
ಪ್ರಕರಣದಲ್ಲಿ ಆರೋಪಿಗಳಾಗಿದ್ದ ಹದಿನಾರು ಮಂದಿಯಲ್ಲಿ ಹದಿನಾಲ್ಕು ಮಂದಿಯನ್ನು ದೋಷಿಗಳೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯವು ಪ್ರಕರಣದಲ್ಲಿ ನಿನ್ನೆ ಈ ತೀರ್ಪನ್ನು ಘೋಷಿಸಿದೆ ಎಂದು ವರದಿಯಾಗಿದೆ.