';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ತಂದೆ ಬೈದಿದ್ದಕ್ಕೆ ಕೋಪಗೊಂಡ ಮಗನೊಬ್ಬ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗೂಡಿನಬಳಿಯಲ್ಲಿ ನಡೆದಿದೆ.
ಗೂಡಿನಬಳಿ ಮಸೀದಿ ಬಳಿಯ ಫಾರೂಕ್ ಎಂಬವರ ಪುತ್ರ ಫೈಝಲ್(15) ಕಾಣೆಯಾದ ಬಾಲಕ.
ಬುದ್ಧಿವಾದ ಹೇಳಿ ಅಪ್ಪ ಮಗನಿಗೆ ಬೈದ ಎಂಬ ಕಾರಣಕ್ಕೆ ಕೋಪಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಏಪ್ರಿಲ್ 05 ರಂದು ರಾತ್ರಿ ಹೊತ್ತು ಮನೆಯಿಂದ ಹೊರಟ ಬಾಲಕ ಇನ್ನೂ ಪತ್ತೆಯಾಗಲಿಲ್ಲ. ಫೋನ್ ಸಂಪರ್ಕಕ್ಕೂ ಮಗ ಸಿಗುತ್ತಿಲ್ಲ ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ. ಮಗನಿಗಾಗಿ ಹುಡುಕಿ ಸುಸ್ತಾದ ಪೋಷಕರು ಬಿಸಿರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾರಿಗಾದರೂ ಕಂಡುಬಂದಲ್ಲಿ 7760961371 ಈ ನಂಬರ್’ಗೆ ಕರೆ ಮಾಡಿ ತಿಳಿಸಬೇಕಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.