ಪುತ್ತೂರು: ಯುವಕನೊಬ್ಬನ ಮೃತದೇಹವೊಂದು ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾಗಿದ ಘಟನೆ ಇಂದು ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು KSRTC ಬಸ್‌ನ ಡ್ರೈವರ್ ಆಗಿರುವ ಕುಸುಮಾಧರ ಗೌಡ ಅಭೀರ (34) ಎಂದು ತಿಳಿದು ಬಂದಿದೆ.
ಈ ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಸಂಭವಿಸಿದ್ದು ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಕಳೆದ 8 ವರುಷಗಳಿಂದ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಯಾಗಿದ್ದ ಕುಸುಮಾಧರ ರವರು ಕಳೆದ ಒಂದು ವರುಷದ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಆತ್ಮಹತ್ಯೆ ಮಾಡಲು ಕಾರಣ ಏನೆಂದು ಇನ್ನಷ್ಟೇ ತಿಳಿಯಬೇಕಾಗಿದ್ದು ಈ ಬಗ್ಗೆ ಬೆಳ್ಳಾರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯ ವಿರುದ್ದ ನೆಟ್ಟಿಗರಿಂದ ಹರಿದಾಡುತ್ತಿರುವ ಬರಹಗಳು: “ಪವಿತ್ರ ಕುರ್‌ಆನ್ ಕೊರೋನಗಿಂತಲೂ ಅಪಾಯಕಾರಿ” ಎಂದವನ ಮೃತದೇಹ ಇಂದು ಸಿಕ್ಕಿದ್ದು, ಇದು ಎಲ್ಲಾ ಧರ್ಮದವರಿಗೂ ಒಂದು ಪಾಠ ಅಂದುಕೊಳ್ಳಬೇಕು. ಯಾಕಂದ್ರೆ ದೇವನೊಬ್ಬ, ಹಲವು ನಾಮಗಳಿಂದ ಎಲ್ಲ ಧರ್ಮವರು ಪೂಜಿಸುತ್ತಿದ್ದೇವೆ. ಹೀಗಿರುವಾಗ ಯಾವುದೋ ಸಮಯ- ಸಂದರ್ಭದಲ್ಲಿ ಯಾರೋ ಮಾಡಿದ ತಪ್ಪಿಗೆ ಒಂದು ಧರ್ಮದ ದೇವರ ಬಗ್ಗೆ ಅವರ ಗ್ರಂಥದ ಬಗ್ಗೆ ಅವರ ಆರಾಧನಾಲಯ ಬಗ್ಗೆ ಬೇಕಾ ಬಿಟ್ಟಿ ಬರೆಯುವವರಿಗೆ ಇದೊಂದು ಎಚ್ಚರಿಕೆ ಪಾಠ ಅಂದುಕೊಳ್ಳಿ. ಬರೆದವರು ಇಂದಲ್ಲಾ ನಾಳೆ ಇದನ್ನು ಅನುಭವಿಸಲೆಬೇಕು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಇಂದು ಹಲವರು ಬರೆದುಕೊಂಡಿದ್ದಾರೆ.
ಮೃತ ಯುವಕ ತನ್ನ ಫೇಸ್ಬುಕ್’ನಲ್ಲಿ ಹಲವು ವರ್ಷಗಳ ಮುಂಚೆ ಗೀಚಿದ ಕೆಲವೊಂದು ಬರಹದ ಸ್ಕ್ರೀನ್ ಶೂಟ್ ಅನ್ನು ಟ್ಯಾಗ್ ಮಾಡುತ್ತಾ ಈ ರೀತಿಯ ಬರಹಗಳೊಂದಿಗೆ ಹರಿಯಬಿಟ್ಟಿದ್ದಾರೆ.
ಈ ರೀತಿಯ ಬರಹಗಳನ್ನು ಧಾರ್ಮಿಕ ಪಂಡಿತರು ಹಾಗೂ ಹಲವರು ವಿರೋಧ ವ್ಯಕ್ತಪಡಿಸಿದ್ದು ಒರ್ವ ಮಾಡಿದ ತಪ್ಪನ್ನು ಆತ ಮೃತಪಟ್ಟ ಸಂದರ್ಭದಲ್ಲಿ ಅದನ್ನು ಈ ರೀತಿಯಾಗಿ ಬಳಸಿಕೊಳ್ಳುವುದು ತಪ್ಪು ಇದು ಮಾನವೀಯತೆಗೆ ತದ್ವೀರುದ್ದವಾಗಿದ್ದು ಇದು ನಿಮ್ಮತನವನ್ನು ಎತ್ತಿ ಹಿಡಿಯುತ್ತದೆ. ಆದ್ದರಿಂದ ಯಾರು ಇಂತಹ ಬರಹಗಳನ್ನು ಗೀಚದೆ ಇಂತಹ ಬರಹಗಳಿಗೆ ಆಸ್ಪದವನ್ನು ಕೊಡದೆ ಎಲ್ಲರನ್ನು ಎಲ್ಲವನ್ನೂ ಕ್ಷಮಿಸುತ್ತಾ ಮುಂದೆ ಸಾಗಬೇಕೆನ್ನುವ ಎಚ್ಚರಿಕೆ ತುಂಬಿದ ಸಂದೇಶದ ಬರಹಗಳು ಹರಿದಾಡುತ್ತಿವೆ.