ಪುತ್ತೂರು: ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮಸ್ತ ಕೇರಳ ಇಸ್ಲಾಮ್ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಈ ಒಂದು ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು ಇದರಲ್ಲಿ ರೌಳತುಲ್ ಉಲೂಂ ಮದ್ರಸ ಪುಂಜಾಲಕಟ್ಟೆಯ 5ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅನೀಕ್ ರವರು 500/492 ಅಂಕವನ್ನು ಪಡೆದುಕೊಂಡು ಮದ್ರಸಕ್ಕೆ ಪ್ರಥಮ ಸ್ಥಾನ ಮತ್ತು ರೇಂಜಿನಲ್ಲಿ ಟಾಪ್ ಪ್ಲಸ್ ಸ್ಥಾನ ಪಡೆದುಕೊಂಡು ಮಿಂಚಿದ್ದಾರೆ.
ಮಹಮ್ಮದ್ ಅನೀಕ್‌ರವರು ಸಾಜಿ ಹುಸೈನ್ ಪುಂಜಾಲಕಟ್ಟೆ ಹಾಗೂ ನಜುಮುನ್ನಿಸ ಕುಂಬ್ರ ದಂಪತಿಗಳ ಪುತ್ರನಾಗಿದ್ದು ಅದೇ ರೀತಿ ರಾಜಕೀಯ ನೇತಾರ ದಾರ್ಮಿಕ ಮುಖಂಡ ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿಯವರ ಮೊಮ್ಮಗನು ಆಗಿರುತ್ತಾನೆ.
ಅದೇ ರೀತಿ ವಿಧ್ಯಾರ್ಥಿಯ ಸಾಧನೆಯನ್ನು ಗುರುತಿಸಿ ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕಾಗಿ ಪುಂಜಾಲಕಟ್ಟೆ ಜಮಾಅತಿಗರು ಮತ್ತು ರಕ್ಷಕ ಶಿಕ್ಷಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಪರೀಕ್ಷೆಯ ವಿವರಗಳು: ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಲ್ಲಿ ಪರೀಕ್ಷೆ ಬರೆದ 2,64,470 ವಿದ್ಯಾರ್ಥಿಗಳಲ್ಲಿ 2,60,741 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.98.59 ಫಲಿತಾಂಶ ದಾಖಲಾಗಿದೆ. ಈ ಪೈಕಿ 3,448 ವಿದ್ಯಾರ್ಥಿಗಳು ಟಾಪ್ ಪ್ಲಸ್, 40,152 ಮಂದಿ ಡಿಸ್ಟಿಂಕ್ಷನ್, 87,447 ಪ್ರಥಮ ದರ್ಜೆ, 44,272 ದ್ವಿತೀಯ ದರ್ಜೆ, 85,422 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ತಿಳಿದು ಬಂದಿದೆ.
ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅವಕಾಶವಿದ್ದು, ಪ್ರತಿ ವಿಷಯವೊಂದಕ್ಕೆ ನೂರು ರೂ. ಶುಲ್ಕ ಪಾವತಿಸಿ ವೆಬ್‌ಸೈಟ್‌ನಲ್ಲಿ ಮದ್ರಸ ಲಾಗಿನ್ ಮಾಡಿ ಎ.8ರಿಂದ 18ರೊಳಗೆ ಅರ್ಜಿ ಸಲ್ಲಿಸಬಹುದೆಂದು ಸಂಭಂದಪಟ್ಟವರು ತಿಳಿಸಿದ್ದಾರೆ.