ಪುತ್ತೂರು: ಮಾರ್ಚ್ ಮೊದಲ ವಾರದಲ್ಲಿ ನಡೆದ ಸಮಸ್ತ ಕೇರಳ ಇಸ್ಲಾಮ್ ಮತ ವಿಧ್ಯಾಭ್ಯಾಸ ಬೋರ್ಡ್ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಈ ಒಂದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಲವು ರೀತಿಯ ಸಾಧನೆ ಮಾಡಿದ್ದು ಇದರಲ್ಲಿ ಕುವ್ವತುಲ್ ಇಸ್ಲಾಂ ಮದ್ರಸ ತಂಬುತಡ್ಕದ 5ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಝಹಿಮಾರವರು 500/318 ಅಂಕವನ್ನು ಪಡೆದುಕೊಂಡು ಮದ್ರಸಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಮಿಂಚಿದ್ದಾರೆ.
ಫಾತಿಮತ್ ಝಹಿಮಾರವರು ಆಶಿಕುದ್ದೀನ್ ಪರ್ಪುಂಜ ಹಾಗೂ ತಾಹಿರಾ ತಂಬುತ್ತಡ್ಕ ದಂಪತಿಗಳ ಪುತ್ರಿಯಾಗಿದ್ದಾರೆ.ಈ ಒಂದು ಸಾಧನೆಗೆ ಜಮಾಅತಿಗರು ಮತ್ತು ಶಿಕ್ಷಕ-ರಕ್ಷಕ ವೃಂದದವರು ವಿಧ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
ಪರೀಕ್ಷೆಯ ವಿವರಗಳು: ಐದು, ಏಳು, ಹತ್ತು, ಪ್ಲಸ್ ಟು ತರಗತಿಗಳಲ್ಲಿ ಪರೀಕ್ಷೆ ಬರೆದ 2,64,470 ವಿದ್ಯಾರ್ಥಿಗಳಲ್ಲಿ 2,60,741 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.98.59 ಫಲಿತಾಂಶ ದಾಖಲಾಗಿದೆ. ಈ ಪೈಕಿ 3,448 ವಿದ್ಯಾರ್ಥಿಗಳು ಟಾಪ್ ಪ್ಲಸ್, 40,152 ಮಂದಿ ಡಿಸ್ಟಿಂಕ್ಷನ್, 87,447 ಪ್ರಥಮ ದರ್ಜೆ, 44,272 ದ್ವಿತೀಯ ದರ್ಜೆ, 85,422 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ತಿಳಿದು ಬಂದಿದೆ.
ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅವಕಾಶವಿದ್ದು, ಪ್ರತಿ ವಿಷಯವೊಂದಕ್ಕೆ ನೂರು ರೂ. ಶುಲ್ಕ ಪಾವತಿಸಿ ವೆಬ್‌ಸೈಟ್‌ನಲ್ಲಿ ಮದ್ರಸ ಲಾಗಿನ್ ಮಾಡಿ ಎ.8ರಿಂದ 18ರೊಳಗೆ ಅರ್ಜಿ ಸಲ್ಲಿಸಬಹುದೆಂದು ಸಂಭಂದಪಟ್ಟವರು ತಿಳಿಸಿದ್ದಾರೆ.