ಶಿವಮೊಗ್ಗ: ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ಕೆ.ಈಶ್ವರಪ್ಪ ಧಿಡೀರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ನನ್ನನ್ನು ಯಾವುದೇ ಕ್ಷೇತ್ರಗಳಿಗೆ ಹೆಸರನ್ನು ಸೂಚಿಸಬೇಡಿ ಎಂದು ಅವರು ಹೇಳಿದ್ದಾರೆ.ಬಿಜೆಪಿ ರಾಷ್ಟ್ರಿಯ ಅಧ್ಯಕ್ಷರಿಗೆ ಲಿಖಿತ ಮೂಲಕ ರಾಜಕೀಯ ನಿವೃತ್ತಿ ಪತ್ರ ನೀಡಿದ್ದು ಆ ಮೂಲಕ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆ.ಈಶ್ವರಪ್ಪರ ರಾಜಕೀಯಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ನೆಟ್ಟಿಗರು ಕಾಲು ಎಳೆದಿದ್ದು.ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಬಿಜೆಪಿಯಿಂದ ಈಶ್ವರಪ್ಪರಿಗೆ ಟಿಕೇಟ್ ನೀಡುವುದಿಲ್ಲ ಎಂಬ ಸುದ್ದಿ ಮೊನ್ನೆಯಿಂದ ಹರಿದಾಡುತ್ತಿತ್ತು ಇನ್ನು ಈಶ್ವರಪ್ಪರು ಮರ್ಯಾದಿ ಉಳಿಸಿಕೊಳ್ಳಲು ಇಂತಹ ನಾಟಕವಾದಿದ್ದಾರೆ ಎಂದು ನೆಟ್ಟಿಗರು ಪೋಸ್ಟ್ ,ಕಮೆಂಟ್ ಮಾಡಿದ್ದಾರೆ.
ಈಶ್ವರಪ್ಪ ರ ಭ್ರಷ್ಟಾಚಾರ ಆರೋಪ ನಂತರ ದ ಹಲವು ಬಾಷಣಗಳಿಂದ ಬಿಜೆಪಿ ಪಕ್ಷಕ್ಕೆ ಬಹಳ ಮುಜುಗರವಾಗಿದ್ದು ಇದರಿಂದ ಕೆರಳಿದ ಹೈಕಮಾಂಡ್ ಈ ಬಾರಿ ಚುನಾವಣೆಗೆ ಈಶ್ವರಪ್ಪರನ್ನು ತಡೆ ಹಿಡಿಯಲಾಗಿತ್ತು ಆದ್ದರಿಂದ ಈ ವಿಷಯ ಅರಿತುಕೊಂಡು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮುಂಚೆನೇ ಒಂದು ನಾಟಕವಾಡಿದ್ದಾರೆ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
ಇನ್ನು ಈಶ್ವರಪ್ಪರ ಧಿಡೀರ್ ರಾಜಕೀಯ ನಿವೃತ್ತಿ ಬಿಜೆಪಿಗೆ ಒಂದು ಶಾಕ್ ನೀಡಿದಂತಾಗಿದ್ದು ಹಿರಿಯ ಬಿಜೆಪಿಗನನ್ನು ಹೋರಾಗಿಟ್ಟಂತ್ತಾಗಿದೆ.