';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಮಕ್ಕಳಿಬ್ಬರು ಪೋಷಕರಿಗೆ ಗೊತ್ತಿಲ್ಲದೇ ಹೊಳೆಗೆ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಇದೀಗ ಸುಳ್ಯ ಸಮೀಪದ ಅಡೂರು ಎಂಬಲ್ಲಿ ಸಂಭವಿಸಿದೆ.
ಮೃತ ಕಂದಮ್ಮಗಳನ್ನು ಮುಹಮ್ಮದ್ ಆಶೀಕ್ (7),ಮುಹಮ್ಮದ್ ಫಾಸಿಲ್(9) ಎಂದು ಗುರುತಿಸಲಾಗಿದೆ.
ಪೋಷಕರಿಗೆ ತಿಳಿಯದೇ ನದಿಗೆ ಹೋಗಿದ್ದು ನದಿ ನೀರಿನಲ್ಲಿ ಮುಳುಗಿ ಕಂದಮ್ಮಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಡೂರು ದೇವರಡ್ಕದ ನಿವಾಸಿ ಶಾಫಿ ಎಂಬವರ ಪುತ್ರ ಮುಹಮ್ಮದ್ ಆಶೀಕ್ (7) ಮತ್ತು ಹಸೈನಾರ್ ರವರ ಪುತ್ರ ಮುಹಮ್ಮದ್ ಫಾಸಿಲ್(9) ನೀರಿನಲ್ಲಿ ಮುಳುಗಿ ಮೃತಪಟ್ಟವರು .
ಮೃತದೇಹ ಕಾಸರಗೋಡು ಆಸ್ಪತ್ರೆಯ ಶವಗಾರರಲ್ಲಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.