ಉಪ್ಪಿನಂಗಡಿ: ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರಿನ ಅಭಾವದಿಂದ ಸರಿ ಸಮಾರು ದಶಕಗಳಿಂದಲೂ ಕಷ್ಟಪಡುತ್ತಿರುವ ತೆಕ್ಕಾರಿನ ಕಾಪಿಗುಡ್ಡೆಯ ನಾಲ್ಕು ಮನೆಯ ನಿವಾಸಿಗಳು ಈ ಬಾರಿ ಚುನಾವಣೆ ಬಹಿಷ್ಕಾರಿಸುವುದಾಗಿ ಘೋಷಿಸಿದ್ದಾರೆ.
ಬೇಸಿಗೆ ಕಾಲ ಬಂತೆಂದರೆ ತೆಕ್ಕಾರಿನ ಕಾಪಿಗುಡ್ಡೆಯ ಈ ನಾಲ್ಕು ಮನೆಯವರಿಗೆ ಕಷ್ಟದ ಕಾಲ ಎಂದೇ ಹೇಳಬಹುದು.ಬಾವಿಗಳು ಬತ್ತಿ ಹೋಗಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇವರುಗಳದ್ದು, ಕೊನೆಗೆ ಮಕ್ಕಳನ್ನು ಶಾಲಾ ಮದ್ರಸಕ್ಕೆ ರಜೆ ಮಾಡಿಸಿ ಕುಟುಂಬಸ್ಥರ ಮನೆಗಳಿಗೆ ಪಾಲಾಯಣವಾಗುವುದು ಇವರ ವಾಡಿಕೆ.
ಪ್ರತಿ ಬಾರಿಯೂ ಚುನಾವಣೆ ಬಂದಾಗಲೆಲ್ಲಾ ಮನವೊಲಿಸಿ ನೀರು ನೀಡುತ್ತೇವೆ ಎಂಬ ಸುಳ್ಳು ಆಶ್ವಾಸನೆ ನೀಡಿ ಕಣ್ಮರೆಯಾಗುತ್ತಾರೆ ನಂತರ ಅವರ ಸುದ್ದಿಯೇ ಇರುವುದಿಲ್ಲ ನಮ್ಮ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿ ಆಯಿತು, ಪಂಚಾಯತ್ ಗೂ ಕೂಡ ಈ ಬಗ್ಗೆ ಮೌಖಿಕ ಮತ್ತು ಲಿಖಿತ ರೂಪದಲ್ಲಿ ಮನವಿ ಮಾಡಿದ್ದೇವೆ ಆದರೆ ಯಾರೊಬ್ಬರೂ ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಇನ್ನು ನಾವು ಇಲ್ಲಿಂದ ಪರ್ಮನೆಂಟ್ ಆಗಿ ಬೇರೆ ಕಡೆ ಹೋಗಿ ಮನೆ ಮಾಡಿ ಕೂರುವುದೇ ದಾರಿ ಎಂದು ಹೇಳುತ್ತಾ ಕಣ್ಣೀರು ಸುರಿಸುತ್ತಾರೆ ಈ ನಿವಾಸಿಗಳು.
ಇವರ ಕಷ್ಟದ ನೋವುಗಳಿಗೆ ಈವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದಿಸುತ್ತಿಲ್ಲ ಕುಡಿಯುವ ನಿರೀಗೆ ಈ ನಿವಾಸಿಗಳು ಹರ ಸಹಾಸವೇ ಪಡುತ್ತಿದ್ದಾರೆ.
ಮುಸಲ್ಮಾನರ ಪವಿತ್ರ ತಿಂಗಳಾದ ಈ ರಂಜಾನ್ ತಿಂಗಳಲ್ಲಿ ನೀರಿಲ್ಲದೇ ಬಹಳ ಕಷ್ಟಕರವಾಗುತ್ತಿದೆ.
ಮಕ್ಕಳನ್ನು ಕರೆದುಕೊಂಡು ಹೋಗಿ ಇನ್ನೊಬ್ಬರ ಮನೆಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ನಮ್ಮದಾಗಿದೆ ಎಂದು ಕಣ್ಣೀರಿಡುತ್ತಾ ಡಿ.ಟಿವಿ ಜೊತೆ ಮಾತನಾಡಿದರು ಮಹಿಳೆಯೊಬ್ಬರು.
ಈ ಬಾಗದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಪ್ರತಿ ಬಾರಿಯೂ ಮತದಾನ ಹಾಕಿಸಿ ಕೊಂಡು ವಿಜಯ ಹೊಂದಿದ ಮೇಲೆ ಇತ್ತ ಈ ನಿವಾಸಿಗಳ ಗಮನ ಹರಿಸದೇ ಹೋಗಿರುವುದು ಕೇದಕರ.
ತೆಕ್ಕಾರಿನ ಕಾಪಿಗುಡ್ಡೆಯ ನಾಲ್ಕು ಮನೆಯ ನಿವಾಸಿಗಳ ನೀರಿನ ಅಹಾಕಾರ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯೂ ಈ ವರೆಗೂ ಭೇಟಿ ನೀಡಿ ಮಾತನಾಡಿಸಿಲ್ಲ ಸುತ್ತ ಮುತ್ತಲಿನ ಎಲ್ಲರಿಗೂ ಕೊಳವೆ ಬಾವಿ ಇದೆ. ಆದರೆ ನಮಗೆ ಬಾವಿ ಮಾತ್ರವಿರುವುದು .ಅದು ಕೂಡ ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ಬತ್ತಿ ಹೋಗುತ್ತದೆ.
ನಂತರ ನಮ್ಮ ನೀರಿನ ಪರಿಸ್ಥಿತಿ ಹೇಳಿ ಮುಗಿಯದು.
ಆದ್ದರಿಂದ ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡುವುದರ ಮೂಲಕ ಪ್ರತಿಭತಿಸುತ್ತೇವೆ ಎನ್ನುತ್ತಾರೆ ಕಾಪಿಗುಡ್ಡೆ ನಿವಾಸಿಗಳು.