dtvkannada

ಬೆಳಗಾವಿ: ಬಿಜೆಪಿ ತೊರೆಯುವುದಾಗಿ ಮಾಜಿ ಡಿ.ಸಿ.ಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ವಂಚಿತರಾಗಿರುವ ಸವದಿ ರವರು ಹೈಕಮಾಂಡ್ ನನಗೆ ಮೋಸ ಮಾಡಿದೆ ಬಿಜೆಪಿ ಪಕ್ಷ ಸ್ವತಃ ತಾಯಿ ಇದ್ದಂತೆ ನನಗೆ ಆದರೆ ಇದೀಗ ಸ್ವತಃ ತಾಯಿಯೇ ನನಗೆ ವಿಷ ನೀಡಿದಂತಾಗಿದೆ ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು ನನ್ನ ಅಭಿಮಾನಿ ಮತ್ತು ಕ್ಷೇತ್ರದ ಜನತೆಯ ನಿಲುವಿನಂತೆ ನಾನು ಮುಂದುವರಿಯುತ್ತೇನೆ ನನಗೆ ನನ್ನ ಕ್ಷೇತ್ರದ ಜನತೆ ಮುಖ್ಯ ಅವರ ಅಭಿಪ್ರಾಯದಂತೆ ಮುನ್ನುಗ್ಗುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಇತ್ತ ಬಿಜೆಪಿ ಶಾಸಕರ ರಾಜೀನಾಮೆ ಪರ್ವ ಕೂಡ ಹೆಚ್ಚಾದಂತಿದೆ.ಎಲ್ಲದಕ್ಕೂ ಈ ಬಾರಿಯ ಚುನಾವಣೆ ಬಾರೀ ಕುತೂಹಲ ಮೂಡಿಸಿದೆ.

By dtv

Leave a Reply

Your email address will not be published. Required fields are marked *

error: Content is protected !!