ಪುತ್ತೂರು: ಕರ್ನಾಟಕ ವಿಧಾನ ಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹೊರ ಬಿದ್ದ ಬೆನ್ನಲ್ಲೇ ಅಸಮಾಧಾನದ ಕಿಡಿ ಸ್ಪೋಟ ಗೊಂಡಿದೆ.
ಪುತ್ತೂರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಿಂದಲೂ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರ ಹೆಸರು ಕೇಳಿ ಬರುತ್ತಿತ್ತು ಆದರೆ ಅಭ್ಯರ್ಥಿ ಘೋಷಣೆ ಸಂದರ್ಭದಲ್ಲಿ ನಿರಾಸೆಯಾಗುತ್ತಿತ್ತು.
ಈ ಬಾರಿಯೂ ಪುತ್ತಿಲ ರನ್ನು ಅವರ ಅಭಿಮಾನಿಗಳು ನಿರೀಕ್ಷೆಯಿಟ್ಟಿದ್ದರು ಆದರೆ ಕೊನೆಯ ಸಂದರ್ಭದಲ್ಲಿ ಅವರ ಹೆಸರು ಕೂಡ ಘೋಷಣೆಯಾಗದೆ ಇದೀಗ ಪುತ್ತೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಇಂದು ಅರುಣ್ ಕುಮಾರ್ ಪುತ್ತಿಲ ರವರ ಅಭಿಮಾನಿಗಳು ಇಂದು ಪುತ್ತೂರಿನ ಕೋಟೆಚಾ ಹಾಲ್ ನಲ್ಲಿ ತುರ್ತು ಸಭೆ ಕರೆದಿದ್ದು ಸಾವಿರಾರು ಮಂದಿಗಳು ಸಭೆಯಲ್ಲಿ ಬಾಗವಹಿಸಿ ಬಿಜೆಪಿಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪುತ್ತಿಲರನ್ನು ಪಕ್ಷೇತರವಾಗಿ ಚುನಾಯಿಸಲು ಅಭಿಮಾನಿಗಳು ಒತ್ತಡ ಹಾಕಿದ್ದು ಇನ್ನು ಯಾವ ಅರುಣ್ ಕುಮಾರ್ ರವರು ಹೆಜ್ಜೆ ಹಾಕಲಿದ್ದಾರೆ ಎಂಬುವುದು ಕಾದು ನೋಡಬೇಕಿದೆ.
ಹಿಂದುತ್ವದ ಭದ್ರ ಕೋಟೆಯಲ್ಲಿ ಅಸಮಾಧಾನದ ಹೊಗೆ ಆವರಿಸಿದ್ದು ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ವಿರುದ್ಧ ಅರುಣ್ ಕುಮಾರ್ ಅಭಿಮಾನಿಗಳು ತೀವೃ ವಾಗ್ದಾಳಿ ನಡೆಸಿದರು.