ಪುತ್ತೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಗ್ಗಂಟಾಗಿ ಉಳಿದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯ ಮುಂಚೆನೇ ಶಕುಂತಲಾ ಶೆಟ್ಟಿಗೆ ಟಿಕೇಟ್ ನೀಡುವಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹಾಕಿದ್ದು ಟಿಕೇಟ್ ನೀಡದೇ ಇದ್ದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳಾಗಿ ಅಶೋಕ್ ಕುಮಾರ್ ರೈ, ಹೇಮನಾಥ ಶೆಟ್ಟಿ, ಶಕುಂತಲಾ ಶೆಟ್ಟಿ ನಡುವೆ ಬಾರೀ ಪೈಪೋಟಿಯಿದ್ದು ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುವುದು ಇನ್ನು ಖಚಿತವಾಗಿಲ್ಲ.
ಇದೀಗ ಶಕುಂತಲಾ ಶೆಟ್ಟಿಗೆ ಕೈ ಟಿಕೇಟ್ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಒತ್ತಡ ಹಾಕುತ್ತಿದ್ದು ಇನ್ನು ಟಿಕೇಟ್ ನೀಡದೇ ಹೋದರೆ ಪಕ್ಷಕ್ಕೆ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿ ಶಕು ಅಕ್ಕ ರವರನ್ನು ಪಕ್ಷೇತರವಾಗಿ ಸ್ಪರ್ಧೆಗೆ ನಿಲ್ಲಿಸಲು ಒತ್ತಡ ಹಾಕುವುದಾಗಿ ಮಹಿಳಾ ಕಾಂಗ್ರೆಸ್ ನಾಯಕಿಯರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದರ ಬಗ್ಗೆ ಡಿಟಿವಿ ತಂಡವು ಮಾಜಿ ಶಾಸಕಿಯನ್ನು ಸಂಪರ್ಕಿಸಿದಾಗ ಅವರ ಪತ್ರಿಕಾಗೋಷ್ಠಿ ಬಗ್ಗೆ ನನಗೆ ಗೊತ್ತಿಲ್ಲ ಸ್ವಲ್ಪ ಸಮಯದ ಮುಂಚೆ ವಿಷಯ ತಿಳಿಯಿತು ಹಾಗೂ ನಾನು ಊರಲ್ಲಿಲ್ಲದ ಕಾರಣ ಏನು ಪ್ರತಿಕ್ರಿಯೆ ನೀಡಲಾರೆ ಅದರ ಬಗ್ಗೆ ಅವರಿಂದಲೇ ಮಾಹಿತಿ ಪಡೆಯಬೇಕಷ್ಟೆ ನನಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಪ್ರತಿಕ್ರಿಯೆ ನೀಡಿದ್ದು ಹಾಗೂ ನಾನು ಪಕ್ಷದ ತೀರ್ಮಾನಕ್ಕೆ ಬದ್ದಳಾಗಿದ್ದೇನೆ ಎಂದು ಗಟ್ಟಿ ಮನಸ್ಸಿನೊಂದಿಗೆ ತಿಳಿಸಿದ್ದಾರೆ.
ಜೊತೆಗೆ ಪುತ್ತೂರಿನ ಟಿಕೇಟ್ ಅಶೋಕ್ ರೈಯವರಿಗೆ ಘೋಷಣೆಯಾದ ಬಗ್ಗೆ ಕೇಳಿದಾಗ ಹೈಕಮಾಂಡ್ ಆಗಲಿ ಎಐಸಿಸಿ ಆಗಲಿ ಇದುವರೆಗೆ ಯಾರ ಹೆಸರನ್ನು ಡಿಕ್ಲೇರ್ ಮಾಡಲಿಲ್ಲ ಇನ್ನೂ ಘೋಷಣೆಯಾಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಅಂತೂ ಇಂತು ನೋಡಿದಾಗ ಪುತ್ತೂರಿನ ರಾಜಕೀಯದ ನಡೆ ಬಾರೀ ಕುತೂಹಲ ಮೂಡಿಸಿದ್ದು ಕಾಂಗ್ರೆಸ್ ನಲ್ಲಿ ಯಾರಿಗೆ ಟಿಕೆಟ್ ನೀಡಬಹುದೆಂದು ಕಾದು ನೋಡಬೇಕಾಗಿದೆ.