ಹಾವಿನಲ್ಲಿ ಅನೇಕ ವಿಧಗಳಿವೆ. ಕೆಲವು ವಿಪರೀತ ವಿಷವನ್ನು ಹೊಂದಿರುತ್ತವೆ. ಇನ್ನು ಕೆಲವು ವಿಷಕಾರಿಯಾಗಿಲ್ಲದಿದ್ದರೂ ಬಲು ಅಪಾಯಕಾರಿಯಾಗಿರುತ್ತದೆ. ಹೆಬ್ಬಾವು ಮನುಷ್ಯರನ್ನು ಕೂಡಾ ನುಂಗಿ ಬಿಡುವ ಸಾಮರ್ಥ್ಯ ಹೊಂದಿರುತ್ತದೆ. ಇನ್ನು ಕೆಲವು ಹಾವುಗಳು ಯಾವ ರೀತಿಯಲ್ಲಿಯೂ ಅಪಾಯಕಾರಿಯಾಗಿರುವುದಿಲ್ಲ. ಅವು ನಿರುಪದ್ರವಗಳು. ಆದರೂ ಹಾವುಗಳನ್ನು ನೋಡುವಾಗಲೇ ಮೈ ಜುಮ್ಮೆನ್ನುತ್ತದೆ.
ಈಸ್ಟರ್ನ್ ಬ್ರೌನ್ ಸ್ನೇಕ್ ಅನ್ನು ಸಾಮಾನ್ಯವಾಗಿ ಕಂದು ಹಾವು ಎಂದು ಕರೆಯಲಾಗುತ್ತದೆ. ಇದು ಹೆಚ್ಚು ವಿಷಕಾರಿ ಹಾವು. ಈ ಪ್ರಭೇದದ ಹಾವುಗಳು ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡು ಬರುತ್ತವೆ. ಈ ಕಾರಣದಿಂದಾಗಿ ಈ ಪ್ರದೇಶದಲ್ಲಿ ದೇಶದಲ್ಲಿ ಹಾವು ಕಡಿತದಿಂದಲೇ ಹೆಚ್ಚಿನವರು ಪ್ರಾಣ ಕಳೆದುಕೊಳ್ಳುತ್ತಾರೆ.
ಇದೀಗ ಈ ಹಾವಿಗೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಹಾವುಗಳಿರುವುದನ್ನು ನೋಡಬಹುದು. ಒಂದು ಈಸ್ಟರ್ನ್ ಬ್ರೌನ್ ಸ್ನೇಕ್ ಮತ್ತು ಇನ್ನೊಂದು ಹೆಬ್ಬಾವು. ಇಲ್ಲಿ ಈ ಈಸ್ಟರ್ನ್ ಬ್ರೌನ್ ಸ್ನೇಕ್ ಹೆಬ್ಬಾವನ್ನೇ ನುಂಗುತ್ತಿರುವ ದೃಶ್ಯವನ್ನು ಕಾಣಬಹುದು.
ಈ ವೀಡಿಯೊವನ್ನು ನ್ಯಾಷನಲ್ ಜಿಯಾಗ್ರಫಿಕ್‌ನ ಯೂಟ್ಯೂಬ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ವಿವಿಧ ಕಾಮೆಂಟ್‌ಗಳನ್ನು ಕೂಡಾ ಮಾಡುತ್ತಿದ್ದಾರೆ.