dtvkannada

'; } else { echo "Sorry! You are Blocked from seeing the Ads"; } ?>

ಇಬ್ಬರು ಮಕ್ಕಳು ಅನ್ಯಧರ್ಮದ ಯುವಕರನ್ನು ಪ್ರೀತಿ ಮಾಡುತ್ತಿರುವ ವಿಷಯ ತಿಳಿದ ಪೋಷಕರು ಕೋಪಗೊಂಡು ತಮ್ಮ 16, 18 ವರ್ಷದ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬಿಹಾರದ ಹಾಜಿಪುರದಲ್ಲಿ ನಡೆದಿದೆ.

ಮಕ್ಕಳು ಮಲಗಿದ್ದಾಗ ಅವರನ್ನು ಹತ್ಯೆ ಮಾಡಿರುವ ಕುರಿತು ಪೋಷಕರು ಒಪ್ಪಿಕೊಂಡಿದ್ದಾರೆ, ಪೊಲೀಸರು ಅಪರಾಧ ಸ್ಥಳಕ್ಕೆ ಬಂದಾಗ ಎರಡು ಶವಗಳ ಬಳಿ ತಾಯಿ ರಿಂಕು ದೇವಿ ಕುಳಿತಿರುವುದು ಕಂಡುಬಂದಿದೆ.

'; } else { echo "Sorry! You are Blocked from seeing the Ads"; } ?>

ಪರಾರಿಯಾಗಿರುವ ಪತಿ ನರೇಶ್ ಬೈತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ತಾಯಿಯನ್ನು ವಿಚಾರಿಸಿದಾಗ ಇಬ್ಬರೂ ಹುಡುಗಿಯರು ಬೇರೆ ಬೇರೆ ಜಾತಿಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ತಿಳಿಸಿದ್ದಾರೆ. ಆಗಾಗ ಪಾಲಕರಿಗೆ ತಿಳಿಸದೆ ಮನೆ ಬಿಟ್ಟು ಹೋಗುತ್ತಿದ್ದ ಬಾಲಕಿಯರ ವರ್ತನೆ ಸಹಿಸಲಾರದೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ ತಂದೆ-ತಾಯಿ ಇಬ್ಬರೂ ಕೊಲೆಯಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ತನ್ನ ಪತಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದರು, ಬಳಿಕ ಇಬ್ಬೂ ಒಟ್ಟಾಗಿ ಮಕ್ಕಳನ್ನು ಕೊಂದಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!