dtvkannada

'; } else { echo "Sorry! You are Blocked from seeing the Ads"; } ?>

ವಿಶ್ವದ ಅತ್ಯಂತ ಪವಿತ್ರವಾದ ಸಂಬಂಧವೆಂದರೆ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧ. ಪೋಷಕರು ಮಗುವಿನ ಮೊದಲ ಶಿಕ್ಷಕರಾಗಿದ್ದರೆ, ಅವರಿಗೆ ಪ್ರಮುಖ ಜೀವನ ಪಾಠಗಳನ್ನು ಒದಗಿಸುತ್ತಾರೆ. ಆದರೆ ಒಬ್ಬ ಶಿಕ್ಷಕ ಅಥವಾ ಗುರು ಸ್ಪರ್ಧಾತ್ಮಕ ಭವಿಷ್ಯಕ್ಕಾಗಿ ಅವರನ್ನು ಸಿದ್ಧಪಡಿಸುವ ವ್ಯಕ್ತಿ. ನಾವು ಬೆಳೆಯುತ್ತಿರುವಾಗ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಆದ್ರೆ, ಈ ಆರು ಜನ ಶಿಕ್ಚಕಿಯರು, ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅಪ್ರಾಪ್ತ ವಯಸ್ಸಿನ ಶಾಲಾ ವಿದ್ಯಾರ್ಥಿಗಳನ್ನು ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪದ ಮೇಲೆ ಆರು ಮಂದಿ ಶಿಕ್ಷಕಿಯರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಎರಡು ದಿನಗಳಲ್ಲಿ ಒಟ್ಟು ಆರು ಮಹಿಳಾ ಶಿಕ್ಷಕಿಯರನ್ನು ಅಮೆರಿಕಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

'; } else { echo "Sorry! You are Blocked from seeing the Ads"; } ?>

ಶಿಕ್ಷಕಿಯರ ಪೈಕಿ 38 ವರ್ಷದ ಡ್ಯಾನ್‌ವಿಲ್ಲೆಯ ಎಲ್ಲೆನ್ ಶೆಲ್ ಎಂಬಾಕೆ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಇಬ್ಬರು 16 ವರ್ಷದ ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದು ಆಕೆಯ ವಿರುದ್ಧ ಮೂರನೇ ಬಾರಿ ಕೇಳಿ ಬರುತ್ತಿರುವ ಅತ್ಯಾಚಾರದ ಆರೋಪ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಈಕೆ, ವುಡ್‌ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು, ಅದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು. ಎಲ್ಲೆನ್ ಶೆಲ್ ಕೃತ್ಯದ ಬಗ್ಗೆ ಬೋಯ್ಲ್ ಕೌಂಟಿ ಶಾಲೆಯ ಅಧಿಕಾರಿಗಳು ಆಕೆಯ ಪೋಷಕರಿಗೆ ಪತ್ರವೊಂದನ್ನ ಕಳುಹಿಸಿದ್ದು, ಬಂಧನದ ಬಗ್ಗೆ ಎಚ್ಚರಿಸಿದ್ದರು. ಈಕೆ ವಿರುದ್ಧ ಲೈಂಗಿಕ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆನ್ ಶೆಲ್‌ರನ್ನ ಶಾಲಾ ಸಂಸ್ಥೆ ರಜೆಯ ಮೇಲೆ ಕಳಿಸಿತ್ತು ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>

ಇನ್ನು ಇದೊಂದೇ ಪ್ರಕರಣವಲ್ಲದೇ, ಮಕ್ಕಳನ್ನು ಲೈಂಗಿಕ ದುರುಪಯೋಗ ಮಾಡಿದ ಆರೋಪದ ಮೇಲೆ ಯುಎಸ್‌ನಲ್ಲಿ ಕನಿಷ್ಠ ಆರು ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿದೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.

ಅದಲ್ಲದೇ, ಅಯೋವಾದ ಡೆಸ್ ಮೊಯಿನ್ಸ್‌ನಲ್ಲಿರುವ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿರುವ ಕ್ರಿಸ್ಟನ್ ಗ್ಯಾಂಟ್ (36) ಎಂಬಾಕೆ ಹದಿ ಹರೆಯದ ವಿದ್ಯಾರ್ಥಿಯೊಂದಿಗೆ ಶಾಲೆಯ ಒಳಗೆ ಮತ್ತು ಹೊರಗೆ 5ಕ್ಕೂ ಹೆಚ್ಚು ಬಾರಿ ಲೈಂಗಿಕ ಸಂಪರ್ಕ ನಡೆಸಿದ್ದು, ಈಕೆಯನ್ನು ಶುಕ್ರವಾರ ಬಂಧಿಸಲಾಗಿದೆ.

ಇನ್ನು, ಪೆನ್ಸಿಲ್ವೇನಿಯಾದಲ್ಲಿ ಜಾವೆಲಿನ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಹನ್ನಾ ಮಾರ್ತ್ ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿದ್ದು, ತನ್ನ ಬಳಿ ಜಾವೆಲಿನ್ ತರಬೇತಿಗೆ ಬರುತ್ತಿದ್ದ 17 ವರ್ಷದ ಹುಡುಗನ ಜೊತೆ ಹಲವು ಬಾರಿ ಲೈಂಗಿಕ ಸಂಪರ್ಕ ನಡೆಸಿರುವುದಾಗಿ ದೂರು ದಾಖಲಾಗಿದೆ.

ಇತ್ತ, ತನ್ನ ಶಾಲಾ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಒಕ್ಲಹೋಮಾದ ಎಮಿಲಿ ಹ್ಯಾನ್‌ಕಾಕ್ (26) ಎಂಬ ಶಿಕ್ಷಕಿಯ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಕಳೆದ ಗುರುವಾರ ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಇನ್ನು ಲೈಂಗಿಕ ದುರುಪಯೋಗ ಮಾಡಿದ ಆರೋಪದ ಮೇಲೆ ಯುಎಸ್‌ನಲ್ಲಿ ಒಟ್ಟು ಆರು ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿದೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!