ಅಶೋಕ್ ರೈ ಗೆಲುವಿನೊಂದಿಗೆ ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ- ಹೇಮನಾಥ್ ಶೆಟ್ಟಿ
ಹೇಮನಾಥ್ ಶೆಟ್ಟಿಯವರ ಬೆಂಬಲದಿಂದ ಇನ್ನಷ್ಟು ಶಕ್ತಿ ಬಂದಿದೆ; ಎದುರಾಳಿ ಯಾರೇ ಆದರೂ ಈ ಬಾರಿ ಕಾಂಗ್ರೆಸ್ ಗೆಲುವು ಶತಸಿದ್ಧ-ಅಶೋಕ್ ರೈ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಕೆಪಿಸಿಸಿ ಸಂಯೋಜಕ, ಪುತ್ತೂರಿನ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಕಾವು ಹೇಮನಾಥ್ ಶೆಟ್ಟಿಯವರ ಮನೆಗೆ ಭೇಟಿನೀಡಿದರು.
![](http://dtvkannada.in/wp-content/uploads/2023/04/IMG-20230417-WA0019-1024x772.jpg)
ಇಂದು ಹೇಮನಾಥ್ ಶೆಟ್ಟಿಯವರ ಕಾವು ನಿವಾಸಕ್ಕೆ ಭೇಟಿ ನೀಡಿದ ಅಶೋಕ್ ರೈಯವರು, ಪುತ್ತೂರಿನಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಲು ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಬೇಕೆಂದು ವಿನಂತಿಸಿದರು ಎನ್ನಲಾಗಿದೆ.
ನಂತರ ಮಾತಾಡಿದ ಅಶೋಕ್ ರೈಯವರು, ಪಕ್ಷಕ್ಕಾಗಿ ನಾವೆಲ್ಲರೂ ಜೊತೆಸೇರಿ ದುಡಿಯೋಣ. ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿಸಬೇಕಾಗಿದ್ದು ಅದಕ್ಕೆ ನಿಮ್ಮ ಬೆಂಬಲವೂ ಅಗತ್ಯವಾಗಿದೆ. ಮುಂದಕ್ಕೆ ನಾನು ಗೆದ್ದರೆ ನಿಮ್ಮೆಲ್ಲರ ಜೊತೆಗೂಡಿ ಪುತ್ತೂರಿನ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
![](http://dtvkannada.in/wp-content/uploads/2023/04/IMG-20230417-WA0020.jpg)
ಈ ಸಂದರ್ಭದಲ್ಲಿ ಸಕರಾತ್ಮಕವಾಗಿ ಸ್ಪಂದಿಸಿದ ಕಾವು ಹೇಮನಾಥ್ ಶೆಟ್ಟಿಯವರು, ಕಾಂಗ್ರೆಸ್ ಪಕ್ಷದ ಸಿದ್ಧಾಂತದಂತೆ, ಎಲ್ಲಾ ಧರ್ಮದವರನ್ನು ಹಾಗು ಪಕ್ಷದ ಎಲ್ಲಾ ನಾಯಕರನ್ನು ಗಣನೆಗೆ ತೆಗೆದುಕೊಂಡು ಮುನ್ನಡೆದರೆ ಕಾಂಗ್ರೆಸ್ ಗೆಲುವಿಗಾಗಿ ನಿಮ್ಮ ಜೊತೆ ದುಡಿಯುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ನಿಮ್ಮ ಜೊತೆಯಿದ್ದು ಗೆಲ್ಲಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
![](http://dtvkannada.in/wp-content/uploads/2023/04/IMG-20230417-WA0021-1024x726.jpg)
![](http://dtvkannada.in/wp-content/uploads/2023/04/IMG-20230417-WA0022.jpg)
ಈ ಸಂದರ್ಭದಲ್ಲಿ ಜಯರಾಮ ರೈ, ಅನಿತಾ ಹೇಮನಾಥ್ ಶೆಟ್ಟಿ, ಹನೀಫ್ ಬಗ್ಗುಮೂಲೆ, ಲ್ಯಾನ್ಸಿ ಮಸ್ಕರೇನಸ್, ಕೆಸಿ ಅಶೋಕ್ ಶೆಟ್ಟಿ, ರಹಿಮಾನ್ ಸಂಪ್ಯ, ದಿವ್ಯನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
![](http://dtvkannada.in/wp-content/uploads/2023/04/IMG-20230417-WA0023.jpg)