ಮಂಗಳೂರು: ಕಳೆದ ಹಲವು ತಿಂಗಳುಗಳಿಂದ ಬಾರೀ ಪೈಪೋಟಿ ಮದ್ಯೆ ಕೊನೆಗೂ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇನಾಯತ್ ಅಲಿ ಯನ್ನು ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಮಾಜಿ ಶಾಸಕ ಮೊಯ್ದೀನ್ ಬಾವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿರಂತರ ಮೂರು ತಿಂಗಳುಗಳಿಂದ ಕಾಂಗ್ರೆಸ್ ನಾಯಕರ ಬಳಿ ಹೋಗಿ ಟಿಕೇಟ್ ಬೇಡುವುದು ನನ್ನ ಪರಿಸ್ಥಿತಿ ನನ್ನದಾಗಿದೆ.
ಕ್ಷೇತ್ರದ ಮತದಾರರು ನನ್ನ ಪರ ಒಲವು ತೋರಿದ್ದರೂ ಹಣದ ಬಲ ಇಲ್ಲಿ ಗೆದ್ದಿದೆ, ಕಾಂಗ್ರೆಸ್ ಪಕ್ಷ ನನ್ನ ಬೆನ್ನಿಗೆ ಚೂರಿ ಹಾಕಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷ ಕೊನೆಗೆ ನನ್ನ ಪರವಿದ್ದ ಬಿ.ಫಾರಂ ನ್ನು ತಪ್ಪಿಸಿ ನನಗೆ ಅನ್ಯಾಯವಸೆಗಿದ್ದಾರೆ ಎಂದು ಮಾಜಿ ಶಾಸಕ ಬೇಸರ ವ್ಯಕ್ತಪಡಿಸಿದರು.
ಇನ್ನು ತಡರಾತ್ರಿ ಅಭ್ಯರ್ಥಿ ಘೋಷಣೆಯಾಗುತ್ತಲೇ ಮಾಜಿ ಶಾಸಕ ಕಾಂಗ್ರೆಸ್ ಗೆ ಕೈ ಕೊಟ್ಟು ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನಿರ್ಧರಿಸಿದ್ದಾರೆ.
ಮಂಗಳೂರು ಉತ್ತರದಿಂದಲೇ ಜೆ.ಡಿ.ಎಸ್ ಅಭ್ಯರ್ಥಿಯಾಗಿ ಇಂದು ಮೊಯ್ದೀನ್ ಬಾವ ಇಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅಂತೂ ಮಾಜಿ ಶಾಸಕ ಕಾಂಗ್ರೆಸ್ ಗೆ ಕೈ ಕೊಟ್ಟು ತೆನೆಗೆ ಜೈ ಎಂದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೊಯಿದಿನ್ ಬಾವಾ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಡಿಕೆಶಿ ಅವರು ಟಿಕೆಟ್ ಮಾರಾಟ ಮಾಡಿದ್ದಾರೆ ಪಕ್ಷದ ಸರ್ವೆಯಲ್ಲಿ 78 ಶೇ. ನನ್ನ ಪರವಾಗಿ ಮತಗಳು ಬಂದಿದ್ದವು ಇನಾಯತ್ ಆಲಿಗೆ ಕೇವಲ 7 ಶೇ. ಮತ ಸಿಕ್ಕಿದ್ದರೂ ಪಾಲುದಾರ ಎಂಬ ನೆಪದಲ್ಲಿ ಟಿಕೆಟ್ ಮಾರಿದ್ದಾರೆ ಎಂದು ಗಂಭಿರ ಆರೋಪ ಮಾಡಿದ ಬಾವಾ ನನ್ನ ಟಿಕೆಟ್ ತಪ್ಪಿಸಿದ್ದು ಡಿಕೆ ಶಿವಕುಮಾರ್ ಅವರೇ, ಖಚಿತವಾಗಿ ಹೇಳುತ್ತೇನೆ ಎಂದು ಹರಿಹಾಯ್ದರು.
ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಸೋಲಿಸಲು ಡಿಕೆಶಿ ಟಿಕೆಟ್ ಕೊಟ್ಟಿದ್ದಾರೆ ಎಂದು ಆರೋಪಿಸಿದ ಬಾವಾ ಇನಾಯತ್ ಆಲಿ ಎಲ್ಲಿಂದ ಹಣ ಮಾಡಿದ್ದು ಗೊತ್ತಿದೆ, ಡಿಕೆಶಿ ನೀರಾವರಿ ಸಚಿವನಾದ ಬಳಿಕ ಬಂದಿದ್ದು ಇನಾಯತ್ ಆಲಿ ಯಾರೆಂದೇ ಕ್ಷೇತ್ರದಲ್ಲಿ ಜನರಿಗೆ ಗೊತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೂ ಗೊತ್ತಿಲ್ಲ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಇನಾಯತ್ ಗೆದ್ದರೆ ನನ್ನ ತಲೆ ಕೊಡಲು ಸಿದ್ಧನಿದ್ದೇನೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿ ಮಾಜಿ ಶಾಸಕ ಮೊಯ್ದೀನ್ ಬಾವ ಸವಾಲೆಸೆದರು.
ಕಾರ್ಯಕರ್ತರ ಒತ್ತಾಯದ ಹಿನ್ನೆಲೆ ನಾನು ಜೆಡಿಎಸ್ ಸೇರುತ್ತಿದ್ದೇನೆ. ಮಾನ್ಯ ಕುಮಾರಣ್ಣ ಮತ್ತು ದೇವೇಗೌಡರ ಆಶೀರ್ವಾದ ನನಗೆ ಇದೆ. ಇಂದು ಮಂಗಳೂರು ಉತ್ತರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದರು.