ಕರ್ನಾಟಕ: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಶುಕ್ರವಾರ ಪ್ರಕಟವಾಗಿದ್ದು ಈ ಬಾರಿ ದಕ್ಷಿಣ ಕನ್ನಡ ಮೇಲುಗೈ ಸಾಧಿಸಿದರೆ ಮತ್ತು ಎರಡನೇ ಸ್ಥಾನ ಉಡುಪಿ ಜಿಲ್ಲೆ ತನ್ನದಾಗಿಸಿಕೊಂಡಿದೆ.
ಒಟ್ಟು ದ್ವಿತೀಯ ಪಿಯುಸಿಯಲ್ಲಿ 7.27 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಪತ್ರಿಕಾಗೋಷ್ಠಿಯಲ್ಲಿ ಕೆಎಸ್‌ಇಇಬಿ ಅಧ್ಯಕ್ಷರಾದ ರಾಮಚಂದ್ರನ್ ಮಾಹಿತಿ ನೀಡಿದ್ದು, 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ, ಎರಡನೇ ಸ್ಥಾನ ಉಡುಪಿ, ಮೂರನೇ ಸ್ಥಾನ ಕೊಡಗು, ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆ ಇದೆ.
ಕಲಾ ವಿಭಾಗದಲ್ಲಿ 593 ಅಂಕ ಪಡೆಯುವ ಮೂಲಕ ತಬಸ್ಸುಮ್ ಶೇಖ್ ರಾಜ್ಯಕ್ಕೆ ಮೊದಲ ಸ್ಥಾನ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಈ ಒಂದು ಫಲಿತಾಂಶವನ್ನು ವಿಕ್ಷಿಸಲು ಕೆಳಗಿನ ಲಿಂಕ್ ಟಚ್ ಮಾಡಿ 👇
https://karresults.nic.in/
ಅದೇ ರೀತಿ ಈ ಲಿಂಕ್ ಬಳಸಿಕೊಂಡು ಜಾಲತಾಣದಲ್ಲಿ ಕೂಡ ವೀಕ್ಷಿಸಬಹುದೆಂದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಂದು ತಿಳಿಸಿದ್ದಾರೆ.