';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಲಯಾಲಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ ಅವರು ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ.
ಫಾತಿಮಾ ಅವರಿಗೆ 93 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಫಾತಿಮ ಅವರು ಕೊಚ್ಚಿಯ ಚೆಂಪುವಿನ ಮೂಲದವರಾಗಿದ್ದಾರೆ. ನಟ ಮಮ್ಮುಟ್ಟಿ ಸೇರಿದಂತೆ ಅವರ ಐವರು ಒಡಹುಟ್ಟಿದವರನ್ನು ಅಗಲಿದ್ದಾರೆ.
ಇಂದು ಸಂಜೆ 4:00 ಗಂಟೆಗೆ ಚೆಂಪು ಜುಮಾ ಮಸೀದಿ ಕಬ್ರ್’ಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅವರು ನಟ ಮಮ್ಮುಟ್ಟಿ, ಇಬ್ರಾಹಿಂ ಕುಟ್ಟಿ, ಜಕಾರಿಯಾ, ಅಮೀನ, ಸೌದಾ ಮತ್ತು ಶಫೀನಾ ಸೇರಿದಂತೆ ತಮ್ಮ ಮಕ್ಕಳನ್ನು ಅಗಲಿದ್ದಾರೆ.
ಇನ್ನು ಶಶಿ ತರೂರ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡು, ಮಮ್ಮುಟ್ಟಿ ತಾಯಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿತ್ರರಂಗ ಸೇರಿದಂತೆ ಹಲವು ರಾಜಕೀಯ ಗಣ್ಯ ವ್ಯಕ್ತಿಗಳು ಸಹ ಸಂತಾಪ ಸೂಚಿಸುತ್ತಿದ್ದಾರೆ.