ಪ್ರತಿ ಈದ್ ಸಂಭ್ರಮಗಳಲ್ಲಿ ಕೇಳಿ ಬರುವ ಅಪಘಾತಗಳು ಈ ಬಾರಿಯೂ ಸದ್ದು ಮಾಡಿದೆ.
ತನ್ನ ಎಳೆ ವಯಸ್ಸಿನ ತನ್ನೆರೆಡು ಕಂದಮ್ಮಗಳ ಜೊತೆ ಪವಿತ್ರ ಈದ್ ವಿನಿಮಯ ಮಾಡಲು ದ್ವಿಚಕ್ರ ಏರಿದ ಉಪ್ಪಿನಂಗಡಿ ಸಮೀಪದ ಕಳಂಜಿಬೈಲ್ ನ ಜಾಫರ್ ಕಲ್ಲೇರಿಯಲ್ಲಿ ನಡೆದ ಅಪಘಾತವೊಂದರಲ್ಲಿ ತನ್ನೆರೆಡು ಹೆಣ್ಣು ಮಕ್ಕಳ ಕಣ್ಣ ಮುಂದೆಯೇ ಇಹಲೋಕ ತ್ಯಜಿಸಿದ್ದಾರೆ.
ಈದ್ ಮುಸಲ್ಮಾನ ಬಾಂಧವರ ಪಾಲಿಗೆ ಅದೊಂದು ಸಂಭ್ರಮವೇ ಹೌದು ಎಷ್ಟೇ ಕಷ್ಟವಿರಲಿ ಬಡತನವಿರಲಿ ಇದ್ದದರಲ್ಲಿ ಖುಷಿ ಪಟ್ಟು ಈದ್ ಆಚರಿಸುವ ಪ್ರತಿಯೊಂದು ಮನಸ್ಸುಗಳಿಗೆ ಅದೊಂದು ಸಂಭ್ರಮವೇ ಹೌದು.
ಅಂತಹದೇ ಕನಸುಗಳ ಕಟ್ಟಿ ತನ್ನ ಮಕ್ಕಳಿಬ್ಬರನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ತನ್ನ ಕುಟುಂಬಸ್ಥರ ಮನೆಗೆ ಹೊರಟ ಜಾಫರ್ ತಲುಪಿದ್ದು ಮಾತ್ರ ಮರಣ ಎಂಬ ಪರಲೋಕ ಯಾತ್ರೆಗಾಗಿದೆ. ಈದ್ ಸಂಭ್ರಮದಲ್ಲಿದ್ದ ಮನೆೆಯಲ್ಲಿ ಅಪಘಾತ ಸುದ್ದಿ ತಿಳಿದು ಇಡೀ ಕುಟುಂಬವೇ ಕಂಗಾಲಾಗಿ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಪ್ಪಿನಂಗಡಿಯಂತೂ ಇಂತಹ ಹಲವು ಕಣ್ಣೀರ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇದೆ.
ತನ್ನೆರೆಡು ಹೆಣ್ಣುಮಕ್ಕಳ ಕೂರಿಸಿಕೊಂಡು ಹೋದ ತಂದೆ ನಮ್ಮನ್ನು ಬಿಟ್ಟು ಪರಲೋಕ ಯಾತ್ರೆ ಹೋಗುತ್ತಾರೆ ಎಂಬ ಯಾವುದೇ ಸುಳಿವು ಮಕ್ಕಳಿಗಿರಲಿಲ್ಲ, ಅಂದದ ಡ್ರೆಸ್ ಹಾಕಿಸಿ ಮಕ್ಕಳನ್ನು ತನ್ನ ಪತಿಯ ಜೊತೆ ಕಳುಹಿಸಿದ ಜಾಫರ್ ನ ಪತ್ನಿ ಇನ್ನೂ ನಿರೀಕ್ಷೆಯಲ್ಲೇ ಇದ್ದಾರೆ, ತನ್ನ ಪತಿ ಇವಾಗ ಮನೆ ತಲುಪುತ್ತಾರೆ ಎಂದು.
ಆದರೆ ಇವೆಲ್ಲವುಗಳ ಮದ್ಯೆ ಇನ್ನು ಆ ಮನೆಗೆ ತಲುಪುವುದು ಜಾಫರ್‌ನ ಮೃತದೇಹವಿರುವ ಆಂಬ್ಯುಲೆನ್ಸ್ ಆಗಿರಬಹುದು.
ತನ್ನದಲ್ಲದ ತಪ್ಪಿಗೆ ಜಾಫರ್ ರವರು ಇಹಲೋಕ ತ್ಯಜಿಸಿದ್ದಾರೆ.ತನ್ನಿಬ್ಬರು ಕರುಳಕುಡಿಗಳು ಆಸ್ಪತ್ರೆಯ ನಿಘಾ ಘಟಕದಲ್ಲಿದ್ದಾರೆ.
ಇನ್ನು ಪ್ರಾರ್ಥನೆಗಳಷ್ಟೇ ಭರವಸೆ ಆ ಕುಟುಂಬಕ್ಕಾಗಿ ಪ್ರಾರ್ಥನೆ ನಿರತರಾಗೋಣ.
ಸಂಭ್ರಮದ ದಿನಗಳಲ್ಲಿ ಜಾಫರ್ ಮನೆಗೆ ತೆರಳುವ ಆಂಬ್ಯುಲೆನ್ಸ್ ಇದೇ ಕೊನೆಯಾಗಲಿ. ಇದೇ ರೀತಿ ಈದ್ ದಿನ ಸೇರಿ ಅಪಘಾತದಲ್ಲಿ ಮೃತಪಟ್ಟ ಯುವಕರ ಪಟ್ಟಿಯೇ ತಯಾರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಎಚ್ಚರಿಕೆಯ ಬರಹವನ್ನು ಕೊಟ್ಟು ಹರಿಯಬಿಟ್ಟಿದ್ದರು. ಆದರೆ ದೇವರ ವಿಧಿಯಾಟದ ಮುಂದೆ ಎಲ್ಲವೂ ಶೂನ್ಯ ಎಂಬೂದು ಮತ್ತೆ ಮತ್ತೆ ಕಣ್ಣಮುಂದೆಯೇ ಕಾಣಿಸುತ್ತಿರುವುದು ಆಶ್ಚರ್ಯಕರ.. ಏನೇ ಆಗಲಿ ಆ ಕುಟುಂಬಕ್ಕೆ ಆ ದೇವರು ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎನ್ನುವ ಪ್ರಾರ್ಥನೆಯೊಂದಿಗೆ…
✍🏻ಕೆ.ಪಿ.ಬಾತಿಶ್ ತೆಕ್ಕಾರ್