ಮಂಗಳೂರು: ಭೀಕರ ರಸ್ತೆ ಅಪಘಾತಕ್ಕೆ ಬಾಲಕನೊರ್ವ ಬಲಿಯಾದ ಘಟನೆ ಇದೀಗ ಸೂರಿಂಜೆ ಎಂಬಲ್ಲಿ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ಬಾಲಕನನ್ನು ಮುಹಮ್ಮದ್ ಮುಸ್ಲಿಯಾರ್‌ರ ಮಗ ತ್ವಾಹ (16) ಎಂದು ಗುರುತಿಸಲಾಗಿದೆ.
ಈದ್ ಹಬ್ಬದ ಸಂಭ್ರಮದಲ್ಲಿದ್ದ ಬಾಲಕ ಇಂದು ಸಂಜೆ ತನ್ನ ಗೆಳೆಯನ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ, ಸ್ಕೂಟರ್ ಸ್ಕಿಡ್ ಆಗಿದೆ. ಆ ವೇಳೆ ಬಾಲಕ ರಸ್ತೆಗೆಸೆಯಲ್ಪಟ್ಟಿದ್ದು, ಹಿಂದಿನಿಂದ ಬಂದ ಕಾರು ಆತನ ತಲೆಯ ಮೇಲೆ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸ್ಕೂಟರ್,ನಲ್ಲಿದ್ದ ಸಹಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಭೀಕರ ದುರ್ಘಟನೆಯಿಂದ ಶಾಕ್’ಗೊಳಗಾಗಿದ್ದಾನೆ ಎಂದು ತಿಳಿದು ಬಂದಿದೆ.
ಪವಿತ್ರ ಈದ್ ದಿನದ ಸಂಭ್ರಮದಲ್ಲಿರುವಾಗಲೇ ಬಾಲಕನೊರ್ವ ಅಪಘಾತಕ್ಕೆ ಬಲಿಯಾಗಿದ್ದು ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.
ಮಧ್ಯಾಹ್ನ ಉಪ್ಪಿನಂಗಡಿಯಲ್ಲಿ ನಡೆದ ಭೀಕರ ಅಪಘಾತದ ಸುದ್ದಿ ಮಾಸುವ ಬೆನ್ನಲ್ಲೇ ಸೂರಿಂಜೆಯಲ್ಲಿ ಮತ್ತೊಂದು ಅಪಘಾತಕ್ಕೆ ಬಾಲಕನೊರ್ವ ಮೃತಪಟ್ಟಿದ್ದು ಕರವಾಳಿಯನ್ನೇ ದುಃಖದ ಕಡಲಲ್ಲಿ ಮುಳುಗಿಸಿದೆ. ಈದ್ ದಿನ ತನ್ನ ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ತಂದೆ ರಸ್ತೆ ಅಪಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಯಲ್ಲಿದ್ದ ಇಬ್ಬರು ಮಕ್ಕಳಿಗೆ ಗಾಯಗಳಾದ ಘಟನೆ ಉಪ್ಪಿನಂಗಡಿಯ ಕಲ್ಲೇರಿಯಲ್ಲಿ ನಡೆದಿತ್ತು.
ಒಟ್ಟಿನಲ್ಲಿ ಈದ್ ದಿನ ನಡೆದ ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಜೀವತೆತ್ತಿದ್ದಾರೆ.
ವೀಡಿಯೋ ನೋಡಿ👇👇