dtvkannada

'; } else { echo "Sorry! You are Blocked from seeing the Ads"; } ?>

ಲೈವ್ ವೀಡಿಯೋ ಮಾಡುತ್ತಲೇ ವಿವಾಹಿತೆ ಮಹಿಳೆಯೊಬ್ಬರು ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಸುಹಾನ್ ಸೋನಾರ್ (21) ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ. ಈಕೆ ನೇಣಿಗೆ ಶರಣಾಗುವ ಮುನ್ನ ಪ್ರಿಯಕರನ ಬ್ಲ್ಯಾಕ್ಮೇಲ್​ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಹೌದು ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಡಿಯೊದಲ್ಲಿ ಮೊದಲು ತಾನು ಎದುರಿಸುವ ಸಮಸ್ಯೆ ಮತ್ತು ಅದಕ್ಕೆ ಕಾರಣದಾದವರ ಹೆಸರನ್ನು ಹೇಳಿ ಬಿಕ್ಕಿಬಿಕ್ಕಿ ಅಳುತ್ತಲೇ ಬಳಿಕ ನೇಣು ಬಿಗಿದುಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಕಳೆದ ಏಪ್ರಿಲ್ 15ರಂದು ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಕಾರಣ ತಿಳಿಸಿ, ಮೊಬೈಲ್ ವಿಡಿಯೋ ಆನ್ ಮಾಡಿ ನೇಣಿಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ 1 ವರ್ಷದ ಹಿಂದೆ ಸುಹಾನಾ ಜೊತೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಿ ಕೊಟ್ಟಿದ್ದರು.

ಮೂವರಿಂದ ಸುಹಾನಾಳಿಗೆ ಕಿರುಕುಳ:
ಇನ್ನು ಗ್ರಾಮದ ಯುನೀಸ್ ಪಾರ್ಥನಳ್ಳಿ ಹಾಗೂ ದಸ್ತಗಿರಸಾಬ್ ಮುಳವಾಡ ಎಂಬುವವರ ಜೊತೆಗೆ ವಿವಾಹಿತೆ ತಂದೆ ಅಸ್ಲಂ ಮುಲ್ಲಾ ದ್ವೇಷ ಹೊಂದಿದ್ದ. ದಸ್ತಗಿರಸಾಬ್ ಮುಳವಾಡ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಕ್ಕೆ ಅಸ್ಲಂ ಮುಲ್ಲಾ ಕಾರಣವೆಂದು ಸಿಟ್ಟು ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮೂವರು ಸೇರಿ ಸುಹಾನಾ ಬೆನ್ನು ಹತ್ತಿ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಡನನ್ನು ಬಿಟ್ಟು ಬಾ, ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.

'; } else { echo "Sorry! You are Blocked from seeing the Ads"; } ?>

ಇದರಿಂದ ಬೆಸತ್ತಿದ್ದ ಸುಹಾನಾ, ಮೂವರ ಹೆಸರು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಳೆ.
ಸುಹಾನಾ ಕಳೆದ ಏಪ್ರಿಲ್‌ 15ರಂದು ತನ್ನ ಬದುಕಿನಲ್ಲಿ ಬಂದ ಸುಲೇಮಾನ್‌, ನಂತರ ನಡುವೆ ಮದುವೆ, ಬಳಿಕ ಆತ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದು, ಹಣಕ್ಕಾಗಿ ಒತ್ತಡ ಹಾಕುವುದು, ಇನ್ನಿಬ್ಬರು ನೀಡುತ್ತಿರುವ ಕಿರುಕುಳಗಳೆಲ್ಲವನ್ನೂ ವಿವರಿಸಿ ವಿಡಿಯೊ ಮಾಡಿದ್ದಾಳೆ. ಬಳಿಕ ವಿಡಿಯೊ ಆನ್‌ ಇರುವಾಗಲೇ ಆಕೆ ನೇಣು ಹಾಕಿಕೊಂಡಿದ್ದು, ಆಕೆಯ ಸಾವಿನ ಸಂಕಟವೂ ದಾಖಲಾಗಿದೆ.

ಈ ಕುರಿತು ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅಲ್ತಾಪ್ ಹಾಗೂ ಯುನೀಸ್ನನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!