ಪುತ್ತೂರು: ನವ ಯುವತಿಯೋರ್ವಳು ತವರು ಮನೆಯಲ್ಲಿ ವಿಷಪಾಸನ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕೆಮ್ಮಿಂಜೆ ದೇವಾಲಯದಲ್ಲಿ ಮೇನೆಜರ್ ಆಗಿರುವ ಪ್ರಶಾಂತ್ ಅವರ ಪತ್ನಿ ಹರ್ಷಿತಾ (೨೮) ಎಂದು ತಿಳಿದು ಬಂದಿದೆ.
ಹರ್ಷಿತಾ ಮತ್ತು ಬಲ್ನಾಡು ದಿ.ನಾರಾಯಣ ಪೂಜಾರಿಯವರ ಮಗ ಪ್ರಶಾಂತ್ ರವರ ವಿವಾಹವು ಫೆ.೧೦ ರಂದು ನಡೆದಿತ್ತು.
ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸವಿದ್ದ ಹರ್ಷಿತಾ ರವರು ಏ.೨೩ರಂದು ತಾಯಿ ಮನೆಯ ನೆರೆಮನೆಯಲ್ಲಿ ಮದುವೆ ನಿಶ್ಚಿತಾರ್ಥ ಇದ್ದು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗಂಡನ ಮನೆಯಿಂದ ತೆರಳಿದ್ದರು.
ತದನಂತರ ಏ.೨೪ ರಂದು ರಾತ್ರಿ ಬಚ್ಚಲು ಮನೆಗೆ ಹೋಗಿ ಬಂದು ಆಕೆ ತಾನು ವಿಷಪದಾರ್ಥ ಸೇವಿಸುರುವ ಬಗ್ಗೆ ತಾಯಿಯೊಂದಿಗೆ ಹೇಳಿಕೊಂಡಿದ್ದು ತಕ್ಷಣವೇ ಅಸ್ವಸ್ಥಗೊಂಡಿದ್ದಾಳೆ.
ವಿಷಯ ಅರಿತ ಮನೆಯವರು ಕುಟುಂಬಸ್ಥರು ಸೇರಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆದರೆ ಒಂದು ದಿನದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.