';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಒರ್ವ ನಾಪತ್ತೆಯಾದ ಪ್ರಕರಣ ಸಂಭವಿಸಿದ್ದು ಇದೀಗ ಆ ವ್ಯಕ್ತಿಯ ಕಾರು ಮತ್ತು ಚಪ್ಪಲಿ ಸಮುದ್ರದ ಬಳಿ ಪತ್ತೆಯಾಗಿದ್ದು ಈ ಬಗ್ಗೆ ಎಲ್ಲರಲ್ಲೂ ಸಂಶಯ ಮೂಡಿಸಿದೆ.
ನಾಪತ್ತೆಯಾಗಿದ್ದ ವ್ಯಕ್ತಿಯು ವಸಂತ ಎಂದು ಗುರುತಿಸಿದ್ದು ಬುಧವಾರ ಮುಂಜಾನೆ ಮನೆಯಿಂದ ಕಾರಿನಲ್ಲಿ ಸೋಮೇಶ್ವರ ಕಡೆ ತೆರಳಿದ್ದು ಬೆಳಗ್ಗೆಯಿಂದ ವಸಂತರವರ ಕಾರು ಸೋಮೇಶ್ವರ ಭಾಗದಲ್ಲಿ ಕಂಡು ಸ್ಥಳಿಯರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದೀಗ ಪೊಲೀಸರು ವಸಂತರವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದಾರೆ.
ಈಗಾಗಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಸಂತರವರ ಕಾರಿನ್ನು ಪರಿಶೀಲನೆ ನಡೆಸಿದ್ದು ಇದರಲ್ಲಿ ಮೊಬೈಲ್,ಶೂ,ಆಧಾರ್ ಕಾರ್ಡ್ ಪತ್ತೆಯಾಗಿದ್ದು ಈ ಪ್ರಕಾರ ಕಾರನ್ನು ಇಲ್ಲಿರಿಸಿ ವಸಂತರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಸಂಶಯವನ್ನು ವ್ಯಕ್ತ ಪಡಿಸಿದ್ದು ಯುವಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.