dtvkannada

ಮಂಗಳೂರು: ಕೇಂದ್ರ ಗೃಹ ಮಂತ್ರಿ , ಬಿಜೆಪಿ ಚಾಣಕ್ಯ ಅಮಿತ್ ಶಾ ರವರು ಇಂದು ಮಂಗಳೂರು ನಗರಕ್ಕೆ ಭೇಟಿ ನೀಡಿ ನಗರದ ಟೌನ್‌ಹಾಲ್‌ನಿಂದ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ ಬಿಗಿ ಭದ್ರತೆಯೊಂದಿಗೆ ಅನೇಕ ವ್ಯವಸ್ಥೆಗಳನ್ನು ಪೊಲೀಸ್ ಇಲಾಖೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು(29/04/2023) ಸಂಜೆ ಮಂಗಳೂರಿಗೆ ಭೇಟಿ ನೀಡಿ ಕ್ಲಾಕ್‌ ಟವರ್‌ ವೃತ್ತದ ಬಳಿಯಿಂದ ನವ ಭಾರತ್‌ ಸರ್ಕಲ್‌ ವರೆಗೆ ರೋಡ್‌ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಕೈಗೊಳ್ಳ ಬೇಕಾದ ಬಂದೋಬಸ್ತ್‌ ಕುರಿತಂತೆ ಇಂದು ಪೊಲೀಸರು ಸಿದ್ದತೆ ನಡೆಸಿದ್ದಾರೆ. ಈ ರೋಡ್ ಶೋ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳ ಜನರು ಬಾಗವಹಿಸಲಿದ್ದು, ಆ ಪ್ರಯುಕ್ತ ಭದ್ರತೆಯ ಹಿತ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆಯ ಹಿತ ದೃಷ್ಠಿಯಿಂದ ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆ ವರೆಗೆ ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ವಿವರ
1.ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಬಸ್ತುಗಳು ಕೊಟ್ಟಾರಚೌಕ – ಕೆ.ಪಿ.ಟಿ — ನಂತೂರು – ಶಿವಭಾಗ್ -ಬೆಂದೂರ್‌ವಲ್ – ಕರಾವಳಿ ಸರ್ಕಲ್ – ಕಂಕನಾಡಿ ಸರ್ಕಲ್‌ ವೆಲೆನ್ಸಿಯಾ ಮಂಗಳಾದೇವಿ ವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ ವಾಪಾಸ್ ಹೋಗುವುದು.

  1. ಉಡುಪಿ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಬರುವ ಬಸ್ಸುಗಳು ಕೊಟ್ಟಾರ ಚೌಕಿ – ಕೆ.ಪಿ.ಟಿ – ಬಟ್ಟಗುಡ್ಡ – ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಹೋಗುವುದು.
  2. ತಲಪಾಡಿ ಮತ್ತು ಪಡೀಲ್ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಎಲ್ಲಾ ಬಸ್ತುಗಳು ಪಂಪ್‌ವೆಲ್, ಕರಾವಳಿ ಸರ್ಕಲ್ – ಕಂಕನಾಡಿ ಸರ್ಕಲ್ – ವೆಲೆನ್ಸಿಯಾ – ಮಂಗಳಾದೇವಿ ವರೆಗೆ ಸಂಚರಿಸುವುದು ಮತ್ತು ಅದೇ ಮಾರ್ಗವಾಗಿ – ವಾಪಸ್ಸು ಹೋಗುವುದು.
  3. ತಲಪಾಡಿ ಮತ್ತು ಪಡೀಲ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಬರುವ ಎಲ್ಲಾ ಬಸ್ತುಗಳು ಪಂಪ್ವೆಲ್ – ನಂತೂರು – ಕೆಪಿಟಿ – ಕೆ.ಎಸ್.ಅರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಹೋಗುವುದು.
  4. ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಹೊರಡುವ ಎಲ್ಲಾ ಬಸ್‌ ಗಳು ಕೆ.ಎಸ್.ಆರ್.ಟಿ.ಸಿ – ಕುಂಟಿಕಾನ ಮೂಲಕ
    ಕೆ.ಪಿ.ಟಿ ಅಥವಾ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವುದು.
  5. ಕೊಟ್ಟಾರ ಚೌಕಿಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾ ಲಘು ವಾಹನಗಳು ಲೇಡಿಹಿಲ್ – ಮಣ್ಣಗುಡ್ಡ ಜಂಕ್ಷನ್ – ಬಂದರ್ ಜಂಕ್ಷನ್ ಮೂಲಕ ಮುಂದಕ್ಕೆ ಸಂಚರಿಸುವುದು.
  6. ಲಾಲ್‌ಬಾಗ್ ಕಡೆಯಿಂದ ಬಲ್ಮಠ ಕಡೆಗೆ ಸಂಚರಿಸುವ ಎಲ್ಲಾ ಲಘು ವಾಹನಗಳು ಬಿ.ಜಿ. ಸ್ಕೂಲ್ ಜಂಕ್ಷನ್ (ಬೆಸೆಂಟ್ ಜಂಕ್ಷನ್) – ಜೈಲು ರಸ್ತೆ – ಕರಂಗಲ್ಪಾಡಿ ಬಂಟ್ಸ್ ಹಾಸ್ಟೆಲ್ – ಮಲ್ಲಕಟ್ಟೆಯಾಗಿ ಅಥವಾ ಪಿ.ವಿ.ಎಸ್ – – ಹಾಸ್ಟೆಲ್ – ಮಲ್ಲಿಕಟ್ಟೆಯಾಗಿ ಸಂಚರಿಸುವುದು.

ವಾಹನ ಸಂಚಾರ ನಿಷೇದಿತ ಮಾರ್ಗಗಳು:
ಕೇಂದ್ರ ಗೃಹ ಮಂತ್ರಿ ರೋಡ್ ಶೋ ನಡೆಸುವ ಮಾರ್ಗವಾದ ಟೌನ್‌ ಹಾಲ್‌ ಕೆ.ಬಿ.ಕಟ್ಟೆ – ಹಂಪನಕಟ್ಟ – ಕೆ.ಎಸ್.ಆರ್ ರಸ್ತೆ – ಎಂ.ಗೋವಿಂದ ಪೈ (ನವಭಾರತ) ವೃತ್ತ – ಪಿ.ವಿ.ಎಸ್ ವರೆಗೆ ಎಲ್ಲಾ ಕ್ಲಾಕ್ ಟವರ್ – ರೀತಿಯ ವಾಹನಗಳ ಸಂಚಾರವನ್ನು ಮಧ್ಯಾಹ್ನ 3-00 ಗಂಟೆಯಿಂದ ಸಂಜೆ 7-00 ಗಂಟೆಯವರೆಗೆ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. (ತುರ್ತು ಸೇವೆಯ ವಾಹನಗಳು ಮೇಲ್ಕಂಡ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಬಹುದಾಗಿದೆ.)

ವಿಶೇಷ ಸೂಚನೆ: ಕೇಂದ್ರ ಗೃಹ ಮಂತ್ರಿಯವರು ರೋಡ್ ಶೋ ಸಂಬಂಧ ಮಧ್ಯಾಹ್ನ 3-00 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇದಿಸಲಾಗುತ್ತಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗವನ್ನು ಉಪಯೋಗಿಸುವಂತೆ ಕೋರಿದೆ.

ರಾವ್‌&ರಾವ್ ಸರ್ಕಲ್ – ಲೇಡಿಗೋಷನ್ ಆಸ್ಪತ್ರೆ ರಸ್ತೆ
ಸೆಂಟ್ರಲ್ ಮಾರ್ಕೆಟ್ – ಲೇಡಿಗೋಷನ್ ಆಸ್ಪತ್ರೆ ರಸ್ತೆ
ಸೆಂಟ್ರಲ್ ಮಾರ್ಕೆಟ್ – ಕ್ಲಾಕ್ ಟವರ್ ರಸ್ತೆ 1
ಜಿ.ಹೆಚ್.ಎಸ್ ರಸ್ತೆ ಯಿಂದ – ಕೆ.ಬಿ ಕಟ್ಟೆ ರಸ್ತೆ
ಪಿ.ಎಂ ರಸ್ತೆ – ಕೆ.ಎಸ್ ರಾವ್ ರಸ್ತೆ,
ಶರವು ದೇವಸ್ಥಾನದಿಂದ – ಕೆ.ಎಸ್ ರಾವ್ ರಸ್ತೆ,
ಬಾವುಟಗುಡ್ಡೆಯಿಂದ (ಸಿಟಿ ಸೆಂಟರ್ ಬಳಿ) ನಿಂದ ಕೆ.ಎಸ್ ರಾವ್‌ ರಸ್ತೆ,
ವಿ.ಟಿ ರಸ್ತೆ – ಬಿಷಪ್ ಹೌಸ್‌ ಕಡೆಯ ರಸ್ತೆ (ಯೆನೊಪೋಯ ಆಸ್ಪತ್ರೆಯ ಬಳಿ) ಗದ್ದೆಗೇರಿ ರಸ್ತೆಯಿಂದ – ಎಂ.ಗೋವಿಂದ ಪೈ ಸರ್ಕಲ್
ಡೊಂಗರಕೇರಿ ರಸ್ತೆಯಿಂದ – ಎಂ.ಗೋವಿಂದ ಪೈ ಸರ್ಕಲ್
ಶಾರದ ಶಾಲೆಯಿಂದ (ಪಿ.ವಿ.ಎಸ್ ಕಲಾಕುಂಜ) – ಎಂ.ಗೋವಿಂದ ಪೈ ಸರ್ಕಲ್ ಪಿ.ವಿ.ಎಸ್. ಜಂಕ್ಷನ್‌ನಿಂದ – ಎಂ.ಗೋವಿಂದ ಪೈ ಸರ್ಕಲ್
ಮಿಲಾಗ್ರಿಸ್ ರಸ್ತೆಯಿಂದ – ಹಂಪನಕಟ್ಟೆ ಜಂಕ್ಷನ್
ಫೋರಂ ಮಾಲ್‌ನಿಂದ – ಎ.ಬಿ ಶೆಟ್ಟಿ ಸರ್ಕಲ್

ವಾಹನ ಪಾರ್ಕಿಂಗ್ ನಿಷೇಧಿತ ಸ್ಥಳಗಳು:
1) ಸನ್ಮಾನ್ಯ ಕೇಂದ್ರ ಗೃಹ ಮಂತ್ರಿಯವರು ಸಂಚರಿಸುವ ರಸ್ತೆಯಲ್ಲಿ ಅಂದರೆ ಮೇರಿಹಿಲ್ ಹೆಅಪ್ಯಾಡ್ ನಿಂದ ಕೆ.ಪಿ.ಟಿ ಜಂಕ್ಷನ್ – ಬಟ್ಟಗುಡ್ಡ – ಕದ್ರಿಕಂಬ್ಳ – ಬಂಟ್ಸ್ ಹಾಸ್ಟೆಲ್ – ಅಂಬೇಡ್ಕರ್ ವೃತ್ತ – ಹಂಪನಕಟ್ಟ ಜಂಕ್ಷನ್ – ಎ.ಬಿ.ಶೆಟ್ಟ ವರೆಗೆ ಹಾಗೂ ಹಂಪನಕಟ್ಟ – ರೈಲ್ವೇ ನಿಲ್ದಾಣ ರಸ್ತೆ ಟೌನ್‌ಹಾಲ್ ರಸ್ತೆಯ ಎರಡೂ ಬದಿಯಲ್ಲಿ ಬೆಳಗ್ಗೆ 07.00 – ಗಂಟೆಯಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

  1. ಕೇಂದ್ರ ಗೃಹ ಮಂತ್ರಿಯವರು ರೋಡ್ ಶೋ ನಡೆಯುವ ಮಾರ್ಗವಾದ ಟೌನ್‌ಹಾಲ್ ಕೆ.ಬಿ.ಕಟ್ಟೆ – ಹಂಪನಕಟ್ಟ – ಕೆ.ಎಸ್.ಆರ್ ರಸ್ತೆ ಎಂ.ಗೋವಿಂದ ಪೈ (ನವಭಾರತ) ವೃತ್ತ – ಪಿ.ವಿ.ಎಸ್ ವರೆಗಿನ ಕ್ಲಾಕ್ ಟವರ್ – ರಸ್ತೆಯ ಎರಡೂ ಬದಿಗಳಲ್ಲಿ ಬೆಳಗ್ಗೆ 07.00 ಗಂಟೆಯಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
    ಕಾರ್ಯಕ್ರಮಕ್ಕೆ ಬರುವ ವಾಹನ ಮಾಲಕರು/ಚಾಲಕರು ಈ ಕೆಳಕಂಡಂತೆ ಗುರುತಿಸಲಾದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಈ ಸ್ಥಳದಲ್ಲಿ ಮಾಡಿ:
  2. ಕೆನರಾ ಹೈಸ್ಕೂಲ್ ಮೈದಾನ, ಡೊಂಗರಕೇರಿ
  3. ಸಂತ ಅಲೋಶಿಯಸ್ ಶಾಲಾ ಮೈದಾನ, ಬಾವುಟಗುಡ್ಡ,
    03.ರೊಜಾರಿಯೋ ಶಾಲಾ ಮೈದಾನ, ಪಾಂಡೇಶ್ವರಲ

By dtv

Leave a Reply

Your email address will not be published. Required fields are marked *

error: Content is protected !!