ಮಂಗಳೂರು: ಸಾಮಾಜಿಕ ಹೋರಾಟಗಾರ ಆರ್‌ಟಿಐ ಕಾರ್ಯಕರ್ತ ಹನೀಫ್ ಸಾಹೇಬ್ ಪಾಜಪಳ್ಳ ಇಂದು ಮಂಗಳೂರಿನಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಕೆಲವೊಂದು ನಿಲುವನ್ನು ಬೇಸೆತ್ತು ಕಳೆದ ವರ್ಷ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಂತರದ ದಿನದಲ್ಲಿ ಬಿಜೆಪಿಯ ಸರ್ವಾಧಿಕಾರ ದೋರಣೆಯಿಂದ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ವಹಿಸದೆ ಸಾಮಾಜಿಕ ರಂಗದಲದಲ್ಲೇ ಸಕ್ರಿಯರಾಗಿದ್ದರು. ಇಂದು ಅವರು ಮರಳಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಮಾದ್ಯಮದವರೊಂದಿಗೆ ಮಾತನಾಡಿದ ಅವರು ನಾನೊಬ್ಬ ಸಾಮಾಜಿಕ ಕಾರ್ಯಕರ್ತ. ಪ್ರಶ್ನೆಗಳನ್ನು ಕೇಳುವುದು, ಜನರಿಗಾಗಿ ಧ್ವನಿ ಎತ್ತುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಬಿಜೆಪಿಯು ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಮನೋಧರ್ಮ ಇಲ್ಲದ ಪಕ್ಷವಾಗಿದೆ ಮಾರ್ಪಾಡುಗೊಂಡಿದೆ.
ವರ್ತಮಾನಕಾಲಕ್ಕೆ ಕಾಂಗ್ರೆಸ್ ಅನಿವಾರ್ಯವಿದ್ದು ನಾವೆಲ್ಲರೂ ಮುಂದಿನ ಹತ್ತು ದಿನ ಕಾಂಗ್ರೆಸನ್ನು ಗೆಲ್ಲಿಸುವ ಪ್ರತಿಜ್ಞೆಯೊಂದಿಗೆ ಸಜ್ಜರಾಗಬೇಕೆಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.