dtvkannada

ಮಂಡ್ಯ: ಅಣ್ಣನ ಹೆಂಡತಿ ಹಾಗೂ ಆಕೆಯ ಪುತ್ರನನ್ನು ಭೀಕರವಾಗಿ ಕೊಚ್ಚಿ ಕೊಂದ ಭಯಾನಕ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹೆಗಡಹಳ್ಳಿ ಎಂಬಲ್ಲಿ ನಡೆದಿದೆ

ಆರೋಪಿ ಸತೀಶ್ ತನ್ನ ಅತ್ತಿಗೆ ಶಾಂತಮ್ಮ ಹಾಗೂ ಅವರ ಮಗ ಯಶವಂತ್ ಎಂಬವರನ್ನು ಕುಡುಗೋಲು ಮೂಲಕ ಹೊಡೆದು ಸಾಯಿಸಿದ್ದಾನೆ.
ನಿನ್ನೆ(ಏ.27) ಮದ್ಯಾಹ್ನ ಶಾಂತಮ್ಮ ಹಾಗೂ ಯಶವಂತ್ ಎಂಬುವವರು ಗದ್ದೆಗೆ ನೀರು ಹಾಯಿಸಲು ತೆರಳಿದ್ದಾರೆ. ಇದೇ ವೇಳೆ ಗದ್ದೆ ಬಳಿ ಬಂದ ಮೈದುನ ಸತೀಶ್​, ನೀರಿನ ವಿಚಾರಕ್ಕೆ ಕಿರಿಕ್ ತೆಗೆದಿದ್ದಾನೆ. ಶಾಂತಮ್ಮ ಹಾಗೂ ಸತೀಶ್​ನಿಗೂ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ, ರೊಚ್ಚಿಗೆದ್ದ ಸತೀಶ ಮನೆಯಲ್ಲಿದ್ದ ಕುಡುಗೋಲು ತೆಗೆದುಕೊಂಡು ಬಂದು ಏಕಾಏಕಿ ದಾಳಿ ಮಾಡಿದ್ದಾನೆ.

ಹೌದು ಶಾಂತಮ್ಮಳ ತಲೆ ಎದೆ ಕತ್ತು ಹಾಗೂ ಹೊಟ್ಟೆ ಭಾಗಕ್ಕೆ ಮನಸೋ ಇಚ್ಛೆ ಕೊಚ್ಚಿದ್ದಾನೆ. ಕುಡುಗೋಲಿನ ಏಟಿಗೆ ಶಾಂತಮ್ಮ ಅರಚಾಡುತ್ತ ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾಳೆ. ಅಮ್ಮನ ಚೀರಾಟ, ಕೂಗಾಟ ಕೇಳಿದ ಮಗ ಯಶವಂತ್ ಓಡೋಡಿ ಬಂದು, ತಾಯಿ ಸಹಾಯಕ್ಕೆ ಮುಂದಾಗಿದ್ದಾನೆ. ಈ ವೇಳೆ ಯಶವಂತ್ ಮೇಲೆಯೂ ದಾಳಿ ನಡೆಸಿದ ಸತೀಶ ಆತನನ್ನು ಕೊಚ್ಚಿ ಕೊಂದಿದ್ದಾನೆ.

ಕೊಲೆ ಮಾಡಿದ ಬಳಿಕ ಸಿದಾ ಮನೆಗೆ ಬಂದ ಸತೀಶ ಸ್ನಾನ ಮಾಡಿದ್ದಾನೆ. ಬಳಿಕ ತನ್ನ ಹೆಂಡತಿ ಮಕ್ಕಳನ್ನ ತವರು ಮನೆಗೆ ಕಳುಹಿಸಿದ್ದಾನೆ. ಆದಾದ ಬಳಿಕ ನೇರವಾಗಿ ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪಾಂಡವಪುರ ಪೊಲೀಸರು. ಆರೋಪಿಯನ್ನ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಹೇಳಿ ಕ್ಷುಲ್ಲಕ ಕಾರಣಕ್ಕೆ ಸ್ವಂತ ಅತ್ತಿಗೆ ಹಾಗೂ ಆಕೆಯ ಮಗನನ್ನ ಕೊಚ್ಚಿ ಕೊಂದಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

By dtv

Leave a Reply

Your email address will not be published. Required fields are marked *

error: Content is protected !!