dtvkannada

ಪುತ್ತೂರು: ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ತನ್ನ ಅಧಿಕಾರಕ್ಕಾಗಿ ದೇಶಕಾಯುವ ಸೈನಿಕರನ್ನು ಬಲಿ ಕೊಡುವ ರಾಷ್ಟ್ರ ದ್ರೋಹಿ ಕೆಲಸ ಮಾಡಿದೆ, ಈಗ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು ಅಧಿಕಾರ ಪಡೆಯಲು ಬಿಜೆಪಿ ಯಾವ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ, ಈ ಬಗ್ಗೆ ರಾಜ್ಯದ ಜನತೆ ಜಾಗ್ರತರಾ ಗಬೇಕಾಗಿದೆ ಎಂದು AICC ಯಿಂದ ದ ಕ ಜಿಲ್ಲೆಗೆ ಚುನಾವಣೆಯ ವೀಕ್ಷಕರಾಗಿ ನಿಯೋಜನೆಗೊಂಡಿರುವ ಹರ್ಯಾಣ ರಾಜ್ಯದ ಕಾಂಗ್ರೆಸ್ ಶಾಸಕರಾಗಿರುವ ನೀರಜ್ ಶರ್ಮರವರು ಹೇಳಿದರು.

ಅವರು ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾರ್ಯವನ್ನು ವೀಕ್ಷಿಸಿದ ಬಳಿಕ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷd ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿಗೆ ದೇಶದ ಸೈನಿಕರ ಬಗ್ಗೆಯಾಗಲಿ, ದೇಶದ ಭದ್ರತೆಯ ಬಗ್ಗೆಯಾಗಲಿ ಒಂದು ಚೂರು ಕಾಳಜಿ ಇಲ್ಲ, 2019 ರ ಲೋಕಸಬಾ ಚುನಾವಣೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಫುಲ್ವಾಮ ದಾಳಿಯಲ್ಲಿ 40 ಜನ ಸೈನಿಕರು ಹತಕೊಂಡಿದ್ದು, ಈ ದಾಳಿಯ ಬಗ್ಗೆ ಮುನ್ಸೂಚನೆ ಇದ್ದರೂ, ಮೋದಿ ಸರಕಾರ ಸೈನಿಕರನ್ನು ವಿಮಾನ ಮೂಲಕ ಸಾಗಿಸದೆ ಟ್ರಕ್ ನ ಮೂಲಕ ಸಾಗಿಸಿರುವುದರಿಂದ ಭಯೋತ್ಪಾದಕ ದಾಳಿಯಿಂದ ಸೈನಿಕರು ಹತರಾಗುವ ಪರಿಸ್ಥಿತಿ ಉಂಟಾಯಿತು,

ಈ ಘಟಣೆಯನ್ನು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಗೆಲುವಿಗೆ ಬಳಸಲಾಯಿತು
ಫುಲ್ವಾಮ ದಾಳಿಯಲ್ಲಿ ಸರಕಾರದ ಷಡ್ಯಂತ್ರ ಬಗ್ಗೆ ಕಾಂಗ್ರೆಸ್ ಪಕ್ಷ ನಾಯಕ ರಾಹುಲ್ ಗಾಂಧಿಯವರು ಮೋದಿ ಸರಕಾರವನ್ನು ಸತತವಾಗಿ ಪ್ರಶ್ನಿಸುತ್ತಲೇ ಬಂದಿರುತ್ತಾರೆ, ಆದರೆ ಮೋದಿ ಸರಕಾರ ಇದಕ್ಕೆ ಉತ್ತರಿಸದೆ ನುಣುಚಿ ಕೊಂಡಿದೆ, ಇದೀಗ ಕಾಶ್ಮೀರದ ರಾಜ್ಯ ಪಾಲರಾಗಿದ್ದ ಸತ್ಯಪಾಲ್ ಮಲಿಕ್ ರವರ ಹೇಳಿಕೆಯಿಂದ ಫುಲ್ವಾಮ ದಾಳಿಯಲ್ಲಿ ಕೇಂದ್ರದ ಮೋದಿ ಸರಕಾರದ ಕೈವಾಡ ಬಟಬಯಲಾಗಿದೆ, ಎಂದು ಹೇಳಿದ ಅವರು ದೇಶ ಉಳಿಯ ಬೇಕಾದರೆ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಹೇಳಿದರು
ಈ ಸಭೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ.ರೈ, ಡಾ.ರಾಜರಾಮ್, ನಝಿರ್ ಮಠ,ನ್ಯಾಯವಾದಿಗಳಾದ ಪದ್ಮನಾಭ, ನೂರುದ್ದಿನ್ ಸಾಲ್ಮರ, ನಾರಾಯಣ ಗೌಡ, ಗ್ರೆಗೊರಿ ಲೋಬೊ ಬನ್ನೂರು, ಮುರಳೀಧರ ರೈ ಮಠ0ದಬೆಟ್ಟು ಉಲ್ಲಾಸ್ ಕೋಟ್ಯಾನ್, ಕೇಶವ ಪಡೀಲ್, ಮನಮೋಹನ್ ರೈ, ಮಹೇಶ್ ಅಂಕೋತಿಮಾರ್, ಜಗನ್ನಾಥ ಶೆಟ್ಟಿ ಕೋಡಿಂಬಾಡಿ, ಮಹಾಲಿಂಗ ನಾಯ್ಕ್, ಶ್ರಿ ಪ್ರಸಾದ್ ಪಾಣಾಜೆ, ಫಾರುಖ್ ಪೆರ್ನೆ, ಶ್ರೀಮತಿ ವಿಶಾಲಾಕ್ಷಿ ಬನ್ನೂರು, ಮೊದಲಾದವರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!