';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹುಬ್ಬಳ್ಳಿ: ಲಕ್ಷ್ಮೀಶ್ವರದಲ್ಲಿ ಅಂತ್ಯವಿಶ್ರಾಂತಿಗೊಳ್ಳುತ್ತಿರುವ ವಲಿಯುಲ್ಲಾಹಿ ಸುಲೈಮಾನ್ ಬಾತಿಷಾ ಅಲ್ ಖಾದಿರಿಯ್ಯಿಲ್ ಜಿಸ್ತಿಯ್ಯಿಲ್ ಬಗ್ದಾದಿ ದೂದ್‌ನಾನ (ನ.ಮ) ಮಹಾನುಭಾವರ ಹೆಸರಿನಲ್ಲಿ ನಡೆಸುವ 134ನೇ ಉರೂಸು ಪ್ರಯುಕ್ತ ಸಮಸ್ತ ಅಭಿಮಾನಿಗಳು, ದರ್ಗಾ ಸಮಿತಿ ಹಾಗೂ ಅಂಜುಮಾನ್ ಕಮಿಟಿಯವರ ಸಹಯೋಗದೊಂದಿಗೆ ಆಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ ದೂದ್‌ನಾನಾ ಆಶಿಕರ ಸಂಗಮವು ಮೇ 01 ಸೋಮವಾರ ಸಂಜೆ 4:30ಕ್ಕೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯ್ಯೋಜಕ ಝೈನುಲ್ ಆಬಿದ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್, ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಸೆಯ್ಯದ್ ಅಮೀರ್ ತಂಙಳ್, ಅಬ್ದುಲ್ ರಝಾಕ್ ಮಸ್ತಾನ್ ಉಪಾಪ, ಸುಲೈಮಾನ್ ಕಣಕೆ, ಹುಸೈನ್ ದಾರಿಮಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.