ಕರ್ನಾಟಕ: ವಿಧಾನಸಭಾ ಚುನಾವಣೆ ಕಾವು ಮುಗಿದಿದ್ದು ಇದೀಗ ಫಲಿತಂಶಾವು ಕಾಂಗ್ರೆಸ್ ಪಕ್ಷದ ಕಡೆ ಬಂದಿದ್ದು ಇದೀಗ ಕರ್ನಾಟಕದ ಸಿಎಂ ಯಾರು ಆಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದ್ದು ಒಳಗಿಂದೊಳಗೆ ಇಬ್ಬರು ನಾಯಕರು ನಡುವೆ ಪೈಪೋಟಿ ನಡೆಯುತ್ತಿದೆ.

ಡಿಕೆಶಿ ಇದೀಗ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಸಿದ್ದರಾಮಯ್ಯ ಮಂತ್ರಿಯಾಗಿದ್ದಾಗ ನಾನು ಸಹಕಾರ ನೀಡಿದ್ದೇನೆ ಈಗ ಅವರು ನನಗೆ ಸಹಕಾರ ನೀಡುವರು ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.
ತಾನು ಮುಖ್ಯಮಂತ್ರಿ ಆಗುವ ವಿಶ್ವಾಸ ಪರೋಕ್ಷವಾಗಿ ವ್ಯಕ್ತಪಡಿಸಿದ ಡಿಕೆಶಿಯವರು ಯಾರಿಗೆ ಟಿಕೆಟ್ ಕೊಡಬೇಕು ಕೊಡಬಾರದೆಂದು ಇದೇ ಅಜ್ಜಯ್ಯನ ಬಳಿ ತಿರ್ಮಾನಿಸಿದ್ದೆ, ಇಲ್ಲಿನ ಸ್ವಾಮೀಜಿಯ ಮಾರ್ಗದರ್ಶನ ಪಡೆದುಕೊಂಡಿದ್ದರ ಫಲವಾಗಿ, ರಾತ್ರಿ ಹಗಲು ಎನ್ನದೇ ದುಡಿದ ಕಾರಣ ಇಂದು ನಮ್ಮ ಸರ್ಕಾರ ಬಂದಿದೆ ಎಂದು ದೇವಸ್ಥಾನದಿಂದ ಹೊರಬಂದು ಡಿಕೆಶಿ ಮಾತನಾಡಿದರು.

ಯಾರು ಸಿಎಂ ಆಗಬೇಕೆಂದು ಹೈಕಮಾಂಡ್ ತಿರ್ಮಾನಿಸುತ್ತೋ ಅಥವಾ ಮೊದಲ ಅವಧಿ ಸಿದ್ದರಾಮಯ್ಯ ಮುಂದಿನ ಅವಧಿ ಡಿಕೆಶಿ ಆಗುತ್ತಾರಾ ಎಂದು ಕಾದು ನೋಡಬೇಕಾಗಿದೆ.ಇಬ್ಬರು ದಿಗ್ಗಜ ನಾಯಕರಾಗಿದ್ದು ಆದರೂ ಸಿದ್ದರಾಮಯ್ಯರ ಕಡೆ ಜನರು ಒಳವು ಜಾಸ್ತಿ ಇದೆ ಅನ್ನಬಹುದು.ಇದೆಲ್ಲದಕ್ಕೂ ಇಂದು ಸಂಜೆಯ ಒಳಗೆ ತೆರೆಬೀಳಲಿದೆ.