ಉಡುಪಿ: ಕೋಮುವಾದ ಸೋಲೋಪ್ಪಿ ಪ್ರೀತಿಯೂ ಇಲ್ಲಿ ಗೆದ್ದಿದೆ ನೂತನ ಸರಕಾರಕ್ಕೆ ಶುಭವಾಗಲಿ ಎಂದು ಉಡುಪಿ ಹಾಸನ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ಸರ್ವಜನಾಂಗದ ಹಿತಬಯಸುವಂತಹ ಕಾರ್ಯಯೋಜನೆಗಳನ್ನು ಹೊಸ ಸರಕಾರವು ಜಾರಿಗೊಳಿಸುವುದನ್ನು ಸಮಸ್ತ ಕನ್ನಡಿಗರು ನಿರೀಕ್ಷಿಸುತ್ತಿದ್ದಾರೆ. ಶಾಂತಿ ಸಹಬಾಳ್ವೆಯ ಸ್ವಸ್ಥ ಸಮಾಜದ ನಿರ್ಮಾಣವು ಸರಕಾರದ ಗುರಿಯಾಗಲಿ. ನಿಷ್ಪಕ್ಷಪಾತ ಆಡಳಿತ ಮಾಡುವ ಮೂಲಕ ಅಕ್ರಮ ಅನ್ಯಾಯಗಳಿಗೆ ಕಡಿವಾಣ ಹಾಕಲು ಸರಕಾರ ಕಟಿಬದ್ಧವಾಗಬೇಕು.
ಶಿಕ್ಷಣ, ಕೃಷಿ, ಆರೋಗ್ಯ, ನೈರ್ಮಲ್ಯ ಅರ್ಥಿಕಾಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು ಅರ್ಹಫಲಾನುಭವಿಗಳಿಗೆ ಸಕಾಲಕ್ಕೆ ದೊರೆಯುವಂತಾಗಲಿ. ದಮನಕ್ಕೊಳಗಾಗುತ್ತಿರುವ ಅಲ್ಪಸಂಖ್ಯಾತರ ರಕ್ಷಣೆಯ ಹೊಣೆಯನ್ನು ಸರಕಾರವು ಮರೆಯಬಾರದು.
ಡ್ರಗ್ಸ್ ಮಾದಕ ಪದಾರ್ಥಗಳ ದಂಧೆಯಂತಹ ಸಮಾಜದ್ರೋಹಿ ದಂಧೆಗಳ ವಿರುದ್ಧ ಸರಕಾರ ಸೂಕ್ತಕ್ರಮಕೈಗೊಳ್ಳಬೇಕು.
ಎಂದು ಉಸ್ತಾದ್ ನೂತನ ಸರ್ಕಾರಕ್ಕೆ ಸಲಹೆ ನೀಡಿದರು.
ಕಾಂಗ್ರೆಸ್ ಇಲ್ಲಿ ಅಧಿಕಾರಕ್ಕೆರಲು ಅಲ್ಪಸಂಖ್ಯಾತ ಮತಗಳು ಇಲ್ಲಿ ಮಹತ್ವದ್ದಾಗಿದೆ.